ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿಯ ಕ್ಲರ್ಕ್ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೆರ್ಮುದೆ ಬಳಿಯ ಕಟ್ಟದ ಕಾಡು ನಿವಾಸಿ ಶಂಕರ ಗೌಡ.ಕೆ [56] ಮೃತಪಟ್ಟಿದ್ದಾರೆ. ಇವರು ತಾಲೂಕು ಕಚೇರಿಯಿಂದ ಗುರುವಾರ ಸಂಜೆ ಕೆಲಸ ಮುಗಿಸಿ ಸುಮಾರು 5ಗಂಟೆ ವೇಳೆ ಮನೆಗೆ ತೆರಳಲು ಬಸ್ಗಾಗಿ ನಡೆದು ಹೋಗುತ್ತಿದ್ದಾಗ ಕಚೇರಿ ಸಮೀಪದ ರಸ್ತೆ ಬದಿಯಲ್ಲಿ ಕುಸಿದು ಬಿದ್ದಿದ್ದಾರೆ. ಮಹಿತಿ ತಿಳಿದು ಸಿಬ್ಬಂದಿ ವರ್ಗದವರು ಕೂಡಲೇ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಪ ಹೊತ್ತಿನಲ್ಲಿ ಮೃತಪಟ್ಟರು.
ಇವರು ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಕ್ಲರ್ಕ್ ಉದ್ಯೋಗಿಯಾಗಿದ್ದು, ಮೇ ತಿಂಗಳಲ್ಲಿ ನಿವೃತ್ತಿ ಹೊಂದುವವರಾಗಿದ್ದಾರೆ. ಧರ್ಮತ್ತಡ್ಕ ಲೈಬ್ರೆರಿಯ ಅಧ್ಯಕ್ಷರಾಗಿದ್ದರು. ಅಖಿಲ ಕೇರಳ ಮಲೆ ಕುಡಿ/ ಕುಡಿಯ ಸಮಾಜದ ಸಂಚಾಲಕರಾಗಿದ್ದರು. ಇವರ ಮೃತದೇಹವನ್ನು ಶುಕ್ರವಾರ ತಾಲೂಕು ಕಚೇರಿ ಹಾಗೂ ಧರ್ಮತ್ತಡ್ಕ ಲೈಬ್ರೆರಿಯಲ್ಲಿ ದರ್ಶನಕ್ಕೆ ಇರಿಸಿದ ಬಳಿಕ ಮಧ್ಯಾಹ್ನ ಕಟ್ಟದಕಾಡು ಮನೆ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಮೃತರು [ದಿ] ಧೂಮ ಗೌಡ-[ದಿ] ಲಕ್ಷಿ ದಂಪತಿಯ ಪುತ್ರರಾಗಿದ್ದಾರೆ.
ಪತ್ನಿ ಜಾನಕಿ, ಮಕ್ಕಳಾದ ಧನುಷ್, ದಿವ್ಯ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂದುಗಳು, ಹಿತೈಷಿಗಳನ್ನು ಅಗಲಿದ್ದಾರೆ. ಮನೆಗೆ ಕಾಸರಗೋಡು ಎಡಿಎಂ ಶ್ರುತಿ.ಕೆ.ವಿ, ಮಂಜೇಶ್ವರ ತಲೂಕು ತಶೀಲ್ದಾರ್ ಶಿಬು ಹಾಗೂ ತಾಲೂಕು ಕಚೇರಿ ಸಿಬ್ಬಂದಿ ವರ್ಗ, ವಿಲೇಜ್ ವಿವಿಧ ವಿಲೇಜ್ ಕಚೇರಿಯ ಸಿಬ್ಬಂದಿ ವರ್ಗ, ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದೆ.