ಉಪ್ಪಳ: ಪ್ರಸಿದ್ದ ದೈವ ನರ್ತಕ ಹೃದಯಘಾತದಿಂದ ನಿಧನರಾಗಿದ್ದಾರೆ. ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಗೋಪಾಲಕೃಷ್ಣ.ಪಿ [೫೩] ನಿಧನರಾದರು. ಶುಕ್ರವಾರ ಬೆಳಿಗ್ಗೆ ಸುಮಾರು ೭ಗಂಟೆಯ ವೇಳೆ ಹೃದಯಘಾತ ಉಂಟಾಗಿದ್ದು, ಕೂಡಲೇ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಪ ಹೊತ್ತಿನಲ್ಲಿ ನಿಧನರಾಗಿದ್ದಾರೆ. ಇವರು ಮಂಗಳೂರು ಯೂನಿವರ್ ಸಿಟಿಯಲ್ಲಿ ಕಳೆದ ೧೩ ವರ್ಷಗಳಿಂದ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಪ್ರಸಿದ್ದ ದೈವ ನರ್ತಕರೂ, ಸಮಾಜ ಸೇವಕರೂ ಆಗಿದ್ದರು.
ಕೋಮಾರು ಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕೊರಗಜ್ಜ, ಗುಳಿಗ, ಕೊರತಿ ಮೊದಲಾದ ದೈವದ ನರ್ತಕರಾಗಿದ್ದು, ಈ ಪೈಕಿ ಕೋಮಾರು ಚಾಮುಂಡಿ ದೈವ ಕಟ್ಟುವಲ್ಲಿಕಾಸರಗೋಡು ಜಿಲ್ಲೆಯಲ್ಲಿ ಪ್ರಖ್ಯಾತರಾಗಿದ್ದರು. ಮೃತರು ಪತ್ನಿ ಸುನಿತ ಟೀಚರ್, ಮಕ್ಕಳಾದ ಶ್ರಿಜನ್.ಜಿ ಕೃಷ್ಣ, ಶ್ರವಣ್.ಜಿ ಕೃಷ್ಣ, ಸಹೋದರಿ ಕಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ತಂದೆ ದೆಯ್ಯು, ತಾಯಿ ತನಿಯಾರು ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ಮೊಗ್ರಾಲ್ ಹೈಯರ್ ಸೆಕಂಡರಿ, ಐಲ ಶ್ರೀ ಶಾರದಾ ಬೋವಿ ಶಾಲೆ ಹಾಗೂ ಶಿರಿಯ ಶಾಲೆಗಳ ಅಧ್ಯಾಪಕ ವೃಂದದವರು ಹಾಗೂ ಹಿತೈಷಿಗಳ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.