
ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದ BJPಯ ಮಹಾರಾಷ್ಟ್ರ ಘಟಕದ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥೆ ಸನಾ ಖಾನ್ ಅವರ ಕೊಲೆಯಾಗಿದೆ. ಅವರ ಪತಿಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಬಲ್ಪುರ ಮತ್ತು ನಾಗ್ಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿ ಅಮಿತ್ ಅಲಿಯಾಸ್ ಪಪ್ಪು ಸಾಹುವನ್ನು ಬಂಧಿಸಲಾಗಿದೆ. ಸನಾ ನಾಗ್ಪುರದಿಂದ MPಯ ಜಬಲ್‌ಪುರಕ್ಕೆ ಪತಿ ಅಮಿತ್ ಅವರನ್ನು ಭೇಟಿಯಾಗಲು ಹೋಗಿ 2 ದಿನಗಳಲ್ಲಿ ಮನೆಗೆ ವಾಪಸ್ಸಾಗಬೇಕಿತ್ತು. ಆದರೆ ಅವರು ಹಿಂತಿರುಗಿರಲಿಲ್ಲ.