ಪುಳಿಕುತ್ತಿಯಲ್ಲಿ ೫೦ ಕ್ಕಿಂತಲೂ ಅಧಿಕ ವರ್ಷದ ಸರಕಾರಿ ಬಾವಿ ಈಗಾಲೂ ಉಪಯೋಗ: ಅಭಿವೃದ್ದಿಗೆ ಕ್ರಮಯಿಲ್ಲದೆ ಶೋಚನೀಯವಸ್ಥೆಯಲ್ಲಿ

Share with

ಉಪ್ಪಳ: ನೀರಿಲ್ಲದೆ ಸರಕಾರಿ ಬಾವಿಗಳು ಅಲ್ಲಲ್ಲಿ ಉಪಯೋಗ ಶೂನ್ಯಗೊಂಡಿರುವ ದೃಶ್ಯಗಳು ಕಂಡು ಬರುತ್ತಿದೆ. ಆದರೆ ಪ್ರತಾಪನಗರದ ಪುಳಿಕುತ್ತಿಯಲ್ಲಿ ಸುಮಾರು ೫೦ಕ್ಕಿಂತಲೂ ಅಧಿಕ ವರ್ಷಗಳ ಹಿಂದಿನ ಸರಕಾರಿ ಬಾವಿ ಈಗಲೂ ಉಪಯೋಗಿಸುತ್ತಿದ್ದು, ಆದರೆ ಅಭಿವೃದ್ದಿಯಿಂದ ವಂಚಿತಗೊAಡು ಶೋಚನೀಯವಸ್ಥೆಗೆ ತಲುಪಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ೭ನೇ ವಾರ್ಡ್ ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ಬಳಿಯಲ್ಲಿ ಈ ಬಾವಿ ಎಲ್ಲರ ಗಮನ ಸೆಳೆಯುತ್ತಿದೆ. ಹಿರಿಯರ ಕಾಲದಲ್ಲಿ ನಿರ್ಮಿಸಿದ ಸರಕಾರಿ ಬಾವಿ ಇದಾಗಿದೆ. ಅಂದು ಬಾವಿ ಹಾಗೂ ಪರಿಸರದಲ್ಲಿ ಬಟ್ಟೆ ಒಗೆಯುವ ಕಲ್ಲು ಹಾಗೂ ಜಾನುವಾರುಗಳಿಗೆ ನೀರು ಕುಡಿಯಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಕ್ರಮೇಣ ಅದನ್ನು ತೆರವುಗೊಳಿಸಲಾಗಿದೆ. ಬಾವಿಯಲ್ಲಿ ಬೇಸಿಗೆಯಲ್ಲೂ ದಾರಾಳ ನೀರು ಲಭಿಸುತ್ತಿದೆ. ಈಗಲೂ ನೀರು ತುಂಬಿಕೊAಡಿದೆ. ಕಡು ಬೇಸಿಗೆಯಲ್ಲಿ ನಳ್ಳಿ ನೀರು ಹಲವು ದಿನಕ್ಕೊಮ್ಮೆ ವಿತರಣೆಗೊಳ್ಳುವ ವೇಳೆ ಊರವರಿಗೆ ಈ ಬಾವಿಯೇ ಆಶ್ರಯವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆದರೆ ಅಭಿವೃದ್ದಿಯಿಂದ ವಂಚಿತಗೊAಡಿದೆ. ಬಾವಿಯ ಸುತ್ತು ಸಾರಣೆ ಪೂರ್ತಿ ಕಿತ್ತೋಗಿದೆ. ಬಾವಿಯ ಒಳಗಡೆ ಗಿಡಗಳು ಬೆಳೆದು ಶೋಚನೀಯವಸ್ಥೆಗೆ ತಲುಪಿದೆ. ಬಾವಿಯಯನ್ನು ಅಭಿವೃದ್ದಿಗೊಳಿಸಿ ಉಳಿಸಿಕೊಳ್ಳಲು ಊರವರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಬAಧಪಟ್ಟ ಪಂಚಾಯತ್ ಅಧಿಕಾರಿಗಳು ಮುತುವರ್ಜಿವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಪುಳಿಕುತ್ತಿಯಲ್ಲಿ ೫೦ ಕ್ಕಿಂತಲೂ ಅಧಿಕ ವರ್ಷದ ಸರಕಾರಿ ಬಾವಿ ಈಗಾಲೂ ಉಪಯೋಗ: ಅಭಿವೃದ್ದಿಗೆ ಕ್ರಮಯಿಲ್ಲದೆ ಶೋಚನೀಯವಸ್ಥೆಯಲ್ಲಿ
ಉಪ್ಪಳ: ನೀರಿಲ್ಲದೆ ಸರಕಾರಿ ಬಾವಿಗಳು ಅಲ್ಲಲ್ಲಿ ಉಪಯೋಗ ಶೂನ್ಯಗೊಂಡಿರುವ ದೃಶ್ಯಗಳು ಕಂಡು ಬರುತ್ತಿದೆ. ಆದರೆ ಪ್ರತಾಪನಗರದ ಪುಳಿಕುತ್ತಿಯಲ್ಲಿ ಸುಮಾರು ೫೦ಕ್ಕಿಂತಲೂ ಅಧಿಕ ವರ್ಷಗಳ ಹಿಂದಿನ ಸರಕಾರಿ ಬಾವಿ ಈಗಲೂ ಉಪಯೋಗಿಸುತ್ತಿದ್ದು, ಆದರೆ ಅಭಿವೃದ್ದಿಯಿಂದ ವಂಚಿತಗೊಂಡು ಶೋಚನೀಯವಸ್ಥೆಗೆ ತಲುಪಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ೭ನೇ ವಾರ್ಡ್ ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ಬಳಿಯಲ್ಲಿ ಈ ಬಾವಿ ಎಲ್ಲರ ಗಮನ ಸೆಳೆಯುತ್ತಿದೆ. ಹಿರಿಯರ ಕಾಲದಲ್ಲಿ ನಿರ್ಮಿಸಿದ ಸರಕಾರಿ ಬಾವಿ ಇದಾಗಿದೆ. ಅಂದು ಬಾವಿ ಹಾಗೂ ಪರಿಸರದಲ್ಲಿ ಬಟ್ಟೆ ಒಗೆಯುವ ಕಲ್ಲು ಹಾಗೂ ಜಾನುವಾರುಗಳಿಗೆ ನೀರು ಕುಡಿಯಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಕ್ರಮೇಣ ಅದನ್ನು ತೆರವುಗೊಳಿಸಲಾಗಿದೆ. ಬಾವಿಯಲ್ಲಿ ಬೇಸಿಗೆಯಲ್ಲೂ ದಾರಾಳ ನೀರು ಲಭಿಸುತ್ತಿದೆ. ಈಗಲೂ ನೀರು ತುಂಬಿಕೊAಡಿದೆ. ಕಡು ಬೇಸಿಗೆಯಲ್ಲಿ ನಳ್ಳಿ ನೀರು ಹಲವು ದಿನಕ್ಕೊಮ್ಮೆ ವಿತರಣೆಗೊಳ್ಳುವ ವೇಳೆ ಊರವರಿಗೆ ಈ ಬಾವಿಯೇ ಆಶ್ರಯವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆದರೆ ಅಭಿವೃದ್ದಿಯಿಂದ ವಂಚಿತಗೊಂಡಿದೆ. ಬಾವಿಯ ಸುತ್ತು ಸಾರಣೆ ಪೂರ್ತಿ ಕಿತ್ತೋಗಿದೆ. ಬಾವಿಯ ಒಳಗಡೆ ಗಿಡಗಳು ಬೆಳೆದು ಶೋಚನೀಯವಸ್ಥೆಗೆ ತಲುಪಿದೆ. ಬಾವಿಯಯನ್ನು ಅಭಿವೃದ್ದಿಗೊಳಿಸಿ ಉಳಿಸಿಕೊಳ್ಳಲು ಊರವರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಬAಧಪಟ್ಟ ಪಂಚಾಯತ್ ಅಧಿಕಾರಿಗಳು ಮುತುವರ್ಜಿವಹಿಸಬೇಕೆಂದು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *