ಮಂಗಳೂರು: ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ನಡೆಸಬೇಕು ಎನ್ನುವ ಉದ್ದೇಶದಿಂದ ಮಂಗಳೂರಿನಲ್ಲಿ ಹಿಂದೂ ವ್ಯಾಪಾರಸ್ಥರ ಸಂಘವು ಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಯಿತು ಹಾಗೂ ದೇವಸ್ಥಾನಗಳಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ಮಾಡಬೇಕು, ನಿಮ್ಮ ಜೊತೆ ನಾನಿದ್ದೇನೆ ಎಂದು ಕಟೀಲ್ ಅವರು ಭರವಸೆಯನ್ನು ನುಡಿದರು.
ಕಳೆದ ವರ್ಷ ಕರಾವಳಿ ಭಾಗದಲ್ಲಿ ಹಿಂದೂ ಜಾತ್ರೆಗಳಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ಅನ್ಯಧರ್ಮದವರಿಗೆ ಅವಕಾಶ ಇಲ್ಲ ಎಂಬುವುದರ ಬಗ್ಗೆ ವಿವಾದ ಎದ್ದಿತ್ತು. ನಂತರ ಹಿಂದೂ ಹಿಂದೂ ವ್ಯಾಪಾರಸ್ಥರು ಸೇರಿ ಹಿಂದೂ ವ್ಯಾಪಾರಸ್ಥರ ಸಂಘಟನೆ ಅಸ್ತಿತ್ವಕ್ಕೆ ತಂದಿದ್ದರು ಹಾಗೂ ಈ ಅಭಿಯನವು ರಾಜ್ಯದಲ್ಲೆಡೆ ಪ್ರಸರಿಸಿತ್ತು. ಇದೀಗ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಹಿಂದೂ ವ್ಯಾಪಾರಸ್ಥರ ಸಂಘಟನೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ, ಇದರಿಂದ ಮತ್ತೊಮ್ಮೆ ವಿವಾದ ಉದ್ಭವಿಸುವ ಸಾಧ್ಯತೆ ಕಂಡು ಬರುತ್ತದೆ.