ಮಂಜೇಶ್ವರ ರೈಲ್ವೇ ನಿಲ್ದಾಣದ ಅಭಿವೃದ್ದಿ ಕಾಮಗಾರಿ ಅಮೆನಡಿಗೆಯಲ್ಲಿ: ಕೆಸರು ಗದ್ದೆಯಾದ ಫ್ಲಾಟ್‌ಫಾರ್ಮ್ ಪ್ರಯಾಣಿಕರಿಗೆ ಸಂಕಷ್ಟ

Share with


ಮoಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಅಭಿವೃದ್ದಿ ಕಾಮಗಾರಿ ಅಮೆ ನಡಿಗೆಯಲ್ಲಿ ಸಾಗುತ್ತಿದ್ದು, ಫ್ಲಾಟ್‌ಫಾರ್ಮ್ ಕೆಸರುಗದ್ದೆಯಂತಾಗಿ ಪ್ರಯಾಣಿಕgಗೆ ಸಂಚರಿಸಲು ಸಮಸ್ಯೆ ಉಂಟಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ಹಳೇಯ ಫ್ಲಾಟ್‌ಫಾರ್ಮ್ನ್ನು ಕೆಡವಿ ಮಣ್ಣು ಹಾಕಿ ಎತ್ತರಗೊಳಿಸುವ ಕೆಲಸಗಳು ಹಾಗೂ ಇತರ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಮಳೆಗೆ ಪ್ಲಾಟ್‌ಫಾರ್ಮ್ಗೆ ಹಾಕಿದ ಮಣ್ಣು ಕೆಸರು ಗದ್ದೆಯಾಗಿ ಶೋಚನೀಯವಾಗಿದ್ದು, ಇದರಿಂದ ಪ್ರಯಾಣಿಕರಿಗೆ, ಕುಳಿತುಕೊಳ್ಳಲು, ನಡೆದಾಡಲು ಸಾಧ್ಯವಾಗದಂತ ಸ್ಥಿತಿ ಉಂಟಾಗಿರುವುದಾಗಿ ದೂರಲಾಗಿದೆ. ಇಲಾಖೆ ಅಧಿಕಾರಿಗಳು ಕೂಡಲೇ ಕಾಮಗಾರಿಯನ್ನು ಪೂರ್ತಿಗೊಳಿಸಿ ಪ್ರಯಣಿಕರ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *