ನದಿ ಕಿನಾರೆಯ ಟ್ಯಾಂಕರ್ ಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ನಗರಸಭಾ ಸದಸ್ಯ

Share with

ಬಂಟ್ವಾಳ: ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ (55) ಅವರು ಪಾಣೆಮಂಗಳೂರು ನೇತ್ರಾವತಿ ನದಿ ಕಿನಾರೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ (ಜೂ.05) ನಡೆದಿದ್ದು, ಮೃತರ ಶವವನ್ನು ಟ್ಯಾಂಕ್ ನಿಂದ ಮೇಲಕ್ಕೆತ್ತಲಾಗಿದೆ.

ಬೆಳಿಗ್ಗೆ ಸುಮಾರು 11 ಗಂಟೆಗೆ ಪುತ್ತೂರಿನಿಂದ ಬೈಕಿನಲ್ಲಿ ಬಂದ ರಮೇಶ್ ರೈ ಅವರು ಪಾಣೆಮಂಗಳೂರು ಹಳೆಯ ಸೇತುವೆ ಕೆಳಭಾಗದಲ್ಲಿ ಬೈಕ್ ನಿಲ್ಲಿಸಿ, ಶರ್ಟ್ ಕಳಚಿ, ಪರ್ಸ್‌,ಚಪ್ಪಲಿ ಹಾಗೂ ಮೊಬೈಲ್‌ ಬಿಟ್ಟು ಕಾಣೆಯಾಗಿದ್ದರು.

ಅನಾಥವಾಗಿದ್ದ ಬೈಕ್‌ ಹಾಗೂ ಮೊಬೈಲನ್ನು ಕಂಡು ಸ್ಥಳೀಯರು ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೊಬೈಲ್ ಫೋನ್ ಆಧಾರದ ಮೇಲೆ ಪೋನ್ ಮಾಡಿದಾಗ ನೆಲ್ಲಿಕಟ್ಟೆ ರಮೇಶ್ ರೈ ಅವರ ಬೈಕ್ ಎಂಬುದು ಖಚಿತವಾದ ಬಳಿಕ ಅವರ ಕುಟುಂಬ ಮೂಲಗಳಿಗೆ ಮಾಹಿತಿ ನೀಡಲಾಗಿದೆ.


Share with

Leave a Reply

Your email address will not be published. Required fields are marked *