ಉಡುಪಿ: ಉಡುಪಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಇರ್ಫಾನ್ ಶರೀಫ್ (57) ಅವರು ಜೂ. 3ರಂದು ಬೀಡನಗುಡ್ಡೆಯಲ್ಲಿರುವ ಕಸವಿಲೇವಾರಿ ಸ್ಥಳದಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಅಸ್ವಸ್ಥರಾಗಿದ್ದ ಅವರನ್ನು ರಫೀಕ್ ಎಂಬವರು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಪರೀಕ್ಷಿಸಿದ ವೈದ್ಯಾಧಿಕಾರಿಗಳು ಅವರು ದಾರಿ ಮಧ್ಯದಲ್ಲಿ ಮೃತಪಟ್ಟಿರುವಾಗಿ ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.