ಕಾಸರಗೋಡು: ಆನೆಗುಂದಿ ಮಹಾ ಸಂಸ್ಥಾನಂ ಸರಸ್ವತೀ ಪೀಠದ ಗುರುಗಳಾದ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 19ನೇ ವರ್ಷದ ಚಾತುರ್ಮಾಸ ಆಚರಣೆ ಸಂದರ್ಭದಲ್ಲಿ ಕಾಸರಗೋಡಿನ ಸಂಗೀತ ಕಲಾವಿದ ಪ್ರಕಾಶ್ ಆಚಾರ್ಯ ಕುಂಟಾರು ಸಂಗೀತಾರ್ಚನೆ ಎಂಬ ಕಾರ್ಯಕ್ರಮ ನಡೆಸಿದರು.

ಸಂಗೀತ ವಿದುಷಿ ಉಷಾ ಈಶ್ವರ ಭಟ್ ಅವರ ಶಿಷ್ಯರಾಗಿರುವ ಪ್ರಕಾಶ್ ಆಚಾರ್ಯರನ್ನು ಶ್ರೀಗಳು ಮಂತ್ರಾಕ್ಷತೆಯ ಅನುಗ್ರಹ ನೀಡಿದರು.ಸಂಗೀತಾರ್ಚನೆಯ ಹಾಡುಗಾರಿಕೆ ಹಾಗೂ ಹಾರ್ಮೋನಿಯಂನಲ್ಲಿ ಪ್ರಕಾಶ್ ಆಚಾರ್ಯ, ತಬಲದಲ್ಲಿ ತೇಜಸ್ ಕೊಲ್ಲಂಗಾನ, ರಿಥಂ ಪ್ಯಾಡ್ ನಲ್ಲಿ ಪ್ರದೀಫ್ ಮುರೂರು, ಸಹ ಗಾಯನದಲ್ಲಿ ವಿಘ್ನೇಶ ಆಚಾರ್ಯ ಮುರೂರು ಸಹಕರಿಸಿದರು.