ವಿಶ್ವದ ಅಗ್ರಗಣ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ʼಮೈಸೂರು ಪಾಕ್‌ʼ..! ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪಾಕ್‌ ಹಂಚಿ ಸಂಭ್ರಮ

Share with

ಮೈಸೂರು: ವಿಶ್ವದ ಅತ್ಯುತ್ತಮ ಸಿಹಿ ತಿನಿಸುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ‘ಟೇಸ್ಟ್‌ ಅಟ್ಲಾಸ್‌’ ಮೈಸೂರು ಪಾಕ್‌ಗೆ 14ನೇ ಸ್ಥಾನ ನೀಡಿದೆ. ಮೈಸೂರು ಪಾಕ್‌ ಸಿಹಿಯು ವಿಶ್ವದ ಅಗ್ರಗಣ್ಯ ಸಿಹಿತಿನಿಸುಗಳಲ್ಲಿ 14ನೇ ಸ್ಥಾನ ಪಡೆದಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.

ಈ ಸಂಭ್ರಮವನ್ನು ಮೈಸೂರಿನ ಮಂದಿ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಎರಡೂ ಕಡೆಗಳಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಹಲವರು ಮೈಸೂರು ಪಾಕ್‌ ರೆಸಿಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಮೈಸೂರು ಪಾಕ್‌ಗೆ 90 ವರ್ಷಗಳ ಇತಿಹಾಸವಿದ್ದು, ಈ ಖಾದ್ಯವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮೈಸೂರು ಅರಮನೆಯ ಬಾಣಸಿಗ ಮಾದಪ್ಪ ಅವರದ್ದಾಗಿದೆ. ಮೈಸೂರು ಸಂಸ್ಥಾನದ ಪ್ರಸಿದ್ಧ ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಅಂದಿನ ಊಟಕ್ಕೆ ಸಿಹಿಯಿಲ್ಲದಿದ್ದುದನ್ನು ಗಮನಿಸಿದ ಮಾದಪ್ಪ ಅವರು ಕಡಲೆ ಹಿಟ್ಟು, ತುಪ್ಪ, ಸಕ್ಕರೆಗಳ ಹದವಾದ ಮಿಶ್ರಣವನ್ನು ಬಳಸಿ ಸಿಹಿ ತಿನಿಸನ್ನು ತಯಾರಿಸಿದ್ದರು. ಇದುವೇ ಮುಂದೆ ʼಮೈಸೂರ್‌ ಪಾಕ್‌ʼ ಎಂದು ಹೆಸರಾಯಿತು. ಇದೀಗ ಮೈಸೂರು ಪಾಕ್‌ ಸಿಹಿಯು ವಿಶ್ವದ ಅಗ್ರಗಣ್ಯ ಸಿಹಿತಿನಿಸುಗಳಲ್ಲಿ 14ನೇ ಸ್ಥಾನ ಪಡೆದಿರುವುದು ರಾಜ್ಯದ ಹೆಮ್ಮೆಯ ವಿಚಾರವಾಗಿದೆ.


Share with

Leave a Reply

Your email address will not be published. Required fields are marked *