ಸ್ವರ್ಗದಲ್ಲಿ ನಾಡಹಬ್ಬ ಓಣಂ ವೈವಿಧ್ಯಮಯವಾಗಿ ಆಚರಣೆ

Share with

ನಾಡಹಬ್ಬ-ಓಣಂ

ಪೆರ್ಲ: ಮಾತೃಭೂಮಿ ಸ್ವರ್ಗ ನೇತೃತ್ವದಲ್ಲಿ ಸ್ವರ್ಗ ಸ್ವಾಮೀ ವಿವೇಕಾನಂದ ಎಯುಪಿ ಶಾಲಾ ಪರಿಸರದಲ್ಲಿ ನಾಡಹಬ್ಬ ಓಣಂ-2023 ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು. ಕವಯಿತ್ರಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ಉದ್ಘಾಟಿಸಿದರು.

ಸ್ವಾಮೀ ವಿವೇಕಾನಂದ

ವಾರ್ಡ್ ಸದಸ್ಯ ರಾಮಚಂದ್ರ ಎಂ.ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಪ್ರಿನ್ಸಿಪಾಲ್, ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕ ಅಧ್ಯಕ್ಷ ಪ್ರೊ.ಝೇವಿಯರ್ ಡಿ’ಸೋಜಾ, ಸ್ವರ್ಗ ಶಾಲೆ ಸಂಸ್ಕೃತ ಶಿಕ್ಷಕ ಶ್ರೀಹರಿ ಶಂಕರ ಶರ್ಮಾ ಬಿ.,ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು ಮಾತೃಭೂಮಿ ಅಧ್ಯಕ್ಷ ಸುಬ್ಬಣ್ಣ ಸಿ.ಎಚ್. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಯುರ್ವೇದ ಪಂಚಕರ್ಮ ವಿಭಾಗದಲ್ಲಿ ಪ್ರಥಮ ರಾಂಕ್ ನೊಂದಿಗೆ ಚಿನ್ನದ ಪದಕ ಪಡೆದ ಡಾ.ರಮ್ಯಶ್ರೀ ಡಿ., ಯುವ ಪ್ರತಿಭೆ ನವ್ಯಶ್ರೀ ಎಂ. ಸ್ವರ್ಗ ಹಾಗೂ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದ ಪಡ್ರೆ ವಾಣೀನಗರ ಸರಕಾರಿ ಶಾಲೆ ವಿದ್ಯಾರ್ಥಿ ಶಿವಾನಿ ಪಿ.ಎಸ್, ಅಭಯ್ ಜಿ.ಕೆ, ಪ್ರಣವಿ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಸರಕಾರಿ ಶಾಲೆ

ರವಿರಾಜ್ ಸ್ವರ್ಗ ಅಭಿನಂದಿತರ ಪರಿಚಯ ವಾಚಿಸಿದರು. ಅಂಗನವಾಡಿ ಮಕ್ಕಳಿಗೆ ಮಂಜೊಟ್ಟಿ ಕಾಯಿ ಹೆಕ್ಕುವ ಸ್ಪರ್ಧೆ, ಬಾಲ್ ಮತ್ತು ಬಕೆಟ್, ಸಂಗೀತ ಕುರ್ಚಿ, ಶಾಲಾ ಮಕ್ಕಳಿಗೆ ಬಲೂನ್ ರೇಸ್, ಪೊಟ್ಯಾಟೋ ರೇಸ್, ಸಂಗೀತ ಕುರ್ಚಿ, ಮಹಿಳೆಯರಿಗೆ ಸಂಗೀತ ಕುರ್ಚಿ, ಮ್ಯೂಸಿಕ್ ಬಾಕ್ಸ್, ಗ್ಲಾಸ್ ಬ್ಯಾಲೆನ್ಸ್, ಡಾಜ್‌ಬಾಲ್, ಪುರುಷರಿಗೆ ಬಲೂನ್ ಒಡೆಯುವುದು, ಹಗ್ಗ ಜಗ್ಗಾಟ, ಡಾಜ್ ಬಾಲ್, ಮೊದಲಾದ ಸ್ಪರ್ಧೆಗಳನ್ನು ನಡೆಸಲಾಯಿತು.

ಓಣಂ ಸದ್ಯ

ನವೀನ್ ಕುಮಾರ್ ಮೊಳಕ್ಕಾಲು ಸ್ವಾಗತಿಸಿ ಪೂರ್ಣಿಮ ಮಹೇಶ್ ವಂದಿಸಿದರು. ಚೈತ್ರಾ ಬಿ ಹಾಗೂ ರಾಜೇಶ್ ಬೈರಡ್ಕ ಕಾರ್ಯಕ್ರಮ ನಿರೂಪಿಸಿದರು.‌ಮಧ್ಯಾಹ್ನ ಕೇರಳಿಯ ಶೈಲಿಯ ಓಣಂ ಸದ್ಯ ವಿಶೇಷ ಔತಣ ಕೂಟ ಏರ್ಪಡಿಸಲಾಗಿತ್ತು.


Share with

Leave a Reply

Your email address will not be published. Required fields are marked *