ಕಲ್ಲಡ್ಕ:ಮಹಿಳೆಯರಲ್ಲಿ ಅರಿವು ಮೂಡಿಸಿ ಮಾತೆಯರನ್ನು ಸ್ವಾವಲಂಬಿಗಳಾಗಿ ಮಾಡಿಸುವ ಉದ್ದೇಶದಿಂದ ಪೂಜ್ಯ ಹೇಮಾವತಿ ಹೆಗ್ಡೆ ಯವರ ದೂರದೃಷ್ಟಿ ಯೋಜನೆಯ ಕಾರ್ಯಕ್ರಮವೇ ಮಹಿಳಾ ಜ್ಞಾನವಿಕಾಸ ಕೇಂದ್ರಗಳು. ಈ ಮುಖೇನ ಮಹಿಳೆಯರಿಗೆ ಸೂಕ್ತ ಮಾಹಿತಿ, ತರಬೇತಿ ನೀಡಿ ಸ್ವಾಲಂಬಿ ಜೀವನ ನಡೆಸಲು ಪ್ರೇರೇಪಿಸಿ, ನಾಯಕತ್ವ ಗುಣವನ್ನು ಹೊಂದುವಂತೆ ಮಾಡಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವ ಕೆಲಸ ಅರ್ಥಪೂರ್ಣವಾದದ್ದು ಎಂದು ಗ್ರಾಮಭಿವೃದ್ಧಿ ಯೋಜನೆ ವಿಟ್ಲ ಇದರ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಕಣoತೂರು ರವರು .ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರೀ )ವಿಟ್ಲ ಇದರ ಕಲ್ಲಡ್ಕ ವಲಯದ ಮಾಮೇಶ್ವರ ಒಕ್ಕೂಟದ “ನಂದಾದೀಪ ಜ್ಞಾನವಿಕಾಸ ಕೇಂದ್ರದ” ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ಬೊಳಂತಿಮೊಗೇರು ಇಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು.
ಪ್ರೌಢಶಾಲಾ ಶಿಕ್ಷಕ ರಾಮಣ್ಣ ಗೌಡ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಮಾತನಾಡಿ ಮಹಿಳೆಯರಿಗಾಗಿ ಸರಕಾರವು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದು ಅಂತಹ ಕಾರ್ಯ ಕ್ರಮಗಳು ಎಲ್ಲ ಅರ್ಹ ಮಹಿಳೆರಿಗೆ ತಲುಪುವಂತೆ ಮಾಡಲು ಜ್ಞಾನವಿಕಾಸ ಕೇಂದ್ರಗಳು ಸಹಕರಿಸಬೇಕು ಎಂದರು.
ವೇದಿಕೆಯಲ್ಲಿ ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ, ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ಚಂದ್ರ, ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಕರುಣಾಕರ, ಪುತ್ತೂರು ಶಾಲಾ ಶಿಕ್ಷಕಿ ಚೇತನಾ,ಬಂಟ್ವಾಳ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಧಿನೇಶ್, ಮಾಮೇಶ್ವರ ಒಕ್ಕೂಟ ಅಧ್ಯಕ್ಷ ಹರೀಶ್ ಮಾಡ, ಕಲ್ಲಡ್ಕ ವಲಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮಿ, ಕಲಿಂಜ ಒಕ್ಕೂಟದ ಅಧ್ಯಕ್ಷ ದಯಾನಂದ, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜ್ಞಾನವಿಕಾಸ ಸದಸ್ಯರುಗಳಿಗೆ ಏರ್ಪಡಿಸಿದ ಆಟೋಟ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು, ಜ್ಞಾನವಿಕಾಸ ಸದಸ್ಯರುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
ಜ್ಞಾನವಿಕಾಸ ಸದಸ್ಯರುಗಳಾದ ಶಶಿಕಲಾ ಪ್ರಾರ್ಥಿಸಿ, ವನಿತಾ ಸ್ವಾಗತಿಸಿದರು. ಮಾಮೇಶ್ವರ ಒಕ್ಕೂಟದ ಸೇವಾ ಪ್ರತಿನಿಧಿ ಯಶೋದ ಜ್ಞಾನವಿಕಾಸ್ ಕೇಂದ್ರದ ವಾರ್ಷಿಕ ವರದಿಯನ್ನು ವಾಚಿಸಿದರು. ಗುಲಾಬಿ ವಂದಿಸಿ, ಸುಮಲತಾ ಕಾರ್ಯಕ್ರಮ ನಿರೂಪಿಸಿದರು.
ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರ್ಯಕ್ರಮದ ಅಚ್ಚುಕಟ್ಟಾದ ವ್ಯವಸ್ಥೆಗೆ ಸಹಕರಿಸಿದರು