ಕಾಸರಗೋಡು: ಎಡನಾಡು ಕಣ್ಣೂರು ಸಹಕಾರಿ ಬ್ಯಾಂಕ್ ನ ಕಳತ್ತೂರು ಶಾಖಾ ಮೆನೇಜರ್ ಅವರ ನಿವಾಸದ ಸಮೀಪದಲ್ಲಿರುವ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಮಾಡಿಕೊಂಡ ಘಟನೆ ಆ.10ರಂದು ಸಂಜೆ ವೇಳೆಗೆ ಬದಿಯಡ್ಕ ಸಮೀಪದ ನಾರಂಪಾಡಿಯಲ್ಲಿ ನಡೆದಿದೆ.
ಎಡನಾಡು ಕಣ್ಣೂರು ಸಹಕಾರಿ ಬ್ಯಾಂಕ್ ನ ಕಳತ್ತೂರು ಶಾಖಾ ಮೆನೇಜರ್ ಪಿ. ರಾಮಚಂದ್ರ (46) ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.