ಕಾಸರಗೋಡು: ಕುಂಬಳೆ ಶ್ರೀ ಅನಂತ ಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ನವಾನ್ನ ಸಮರ್ಪಣೆ ಮತ್ತು ಬಲಿವಾಡು ಕೂಟವು ಅ.18 ಬುಧವಾರದಂದು ದೇಲಂಪಾಡಿ ಬ್ರಹ್ಮ ಶ್ರೀ ಗಣೇಶ ತಂತ್ರಿಯವರ ನೇತೃತ್ವದಲ್ಲಿ ಜರಗಲಿರುವುದು.
ಅಂದು ಬೆಳಿಗ್ಗೆ ತುಲಾ ತೆನೆ ಸಮರ್ಪಣೆ, ಗಣಪತಿ ಹೋಮ, ಶುದ್ಧಿ ಕಲಶ, ವೇದ ಪಾರಾಯಣ, 10 ಗಂಟೆಗೆ ಹರಿಕಥೆ ಸತ್ಸಂಗ ಮತ್ತು ಅಪರಾಹ್ನ 12.30ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30ರಿಂದ ನಾರಾಯಣಮಂಗಲ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘದವರಿಂದ ಯಕ್ಷಗಾನ ಕೂಟ ನಡೆಯಲಿದ್ದು, ಸಾಯಂಕಲ 6.15ಕ್ಕೆ ದೀಪಾರಾಧನೆ ಮತ್ತು 7.30ಕ್ಕೆ ವೀಶೆಷ ಕಾರ್ತಿಕ ಪೂಜೆಯು ಜರುಗುವುದು.
ಎಲ್ಲಾ ಭಕ್ತ-ಬಾಂಧವರು ಈ ದೈವಿ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಅಭಯಾಶೀರ್ವಾದಗಳಿಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯು ತಿಳಿಸಿದೆ.