ಕಾಸರಗೋಡು: ಇಲ್ಲಿನ ಸರಕಾರಿ ಕಾಲೇಜು ಎನ್.ಎಸ್.ಎಸ್ 02 & 03 ಘಟಕಗಳು 154ನೇ ಗಾಂಧಿ ಜಯಂತಿಯನ್ನು ನೆಹರೂ ಯುವ ಕೇಂದ್ರದ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳಿಂದ ಆಚರಿಸಿಕೊಂಡಿತು.
ಕೇದ್ರ ಸರ್ಕಾರದ ಎರಡನೇ ಹಂತದ ಕಾರ್ಯಕ್ರಮ ‘ಮೇರಿ ಮಿಟ್ಟಿ, ಮೇರಾ ದೇಶ್’ಗೆ ಚಾಲನೆ ನೀಡಿ ಸ್ವಚ್ಛತಾ ಹಿ ಸೇವೆಯ ಅಂಗವಾಗಿ ಸಿವಿಲ್ ಸ್ಟೇಷನ್ ಸ್ವಚ್ಛತಾ ಚಟುವಟಿಕೆ ನಡೆಸಲಾಯಿತು. ಕಾಸರಗೋಡು ಸರಕಾರಿ ಕಾಲೇಜು ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಆಶಾಲತಾ ಚೇವಾರ್, ಆಸಿಫ್ ಕಾಕ್ಕಶ್ಶೇರಿ ಮತ್ತು ಎನ್.ಎಸ್.ಎಸ್ ಸೆಕ್ರೆಟರಿ ಸಾತ್ವಿಕ್ ಚಂದ್ರನ್.ಪಿ, ಅಭಿಜಿತ್.ಎ, ರಾಹುಲ್ ರಾಜ್, ಸ್ಮಿತಾ, ಸೃಷ್ಟಿ.ಬಿ, ರೇವತಿ.ಪಿ ಮತ್ತು ಮಹಿರಾ ಬೇಗಂ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು.