ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಅ.12,13 ರಂದು ನಡೆದ ಮೈಸೂರು ರಾಜ್ಯ ಮಟ್ಟದ ದಸರಾ ವೈಟ್ ಲಿಫ್ಟಿಂಗ್ ಕ್ರೀಡಾಕೂಟದಲ್ಲಿ 5 ಚಿನ್ನದ ಪದಕ 1 ಬೆಳ್ಳಿಯ ಪದಕ ವನ್ನು ಪಡೆದಿರುತ್ತಾರೆ.
ಪುರುಷರ 61 ಕೆಜಿ ವಿಭಾಗದಲ್ಲಿ ಮುನಾಫ್ ಬೆಳ್ಳಿಯ ಪದಕ, 73 ಕೆಜಿ ವಿಭಾಗದಲ್ಲಿ ಭುವನ್ ರಾಮ್ ಚಿನ್ನದ ಪದಕ, 81 ಕೆಜಿ ವಿಭಾಗದಲ್ಲಿ ಶಬರೀಶ ಬಿ ರೈ ಚಿನ್ನದ ಪದಕ, 89 ಕೆಜಿ ವಿಭಾಗದಲ್ಲಿ ಅಭಿರಾಮಚಂದ್ರ ಅಡಿಗುಂಡಿ ಚಿನ್ನದ ಪದಕ ಹಾಗೂ ಮಹಿಳೆಯರ 45 ಕೆಜಿ ವಿಭಾಗದಲ್ಲಿ ಸ್ಪಂದನ ಕೆ ಚಿನ್ನದ ಪದಕ, 71 ಕೆಜಿ ವಿಭಾಗದಲ್ಲಿ ಬ್ಯೂಲಾ ಪಿ ಟಿ ಇವರು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಸಂತಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಕರಾದ ಎಲಿಯಾಸ್ ಪಿಂಟೋ ಹಾಗೂ ಇವರ ಪ್ರಮುಖ ತರಬೇತಿದರಾರದ ಪುಷ್ಪರಾಜ್ ಇವರ ನೇತೃತ್ವದಲ್ಲಿ ಸಾಧನೆಯನ್ನು ಮಾಡಿರುತ್ತಾರೆ.