ಕಣ್ಣೂರಿನಲ್ಲಿ ಸಿಎನ್‌ಜಿ ಆಟೋರಿಕ್ಷಾ ಬಸ್‌ಗೆ ಡಿಕ್ಕಿ: ಆಟೋ ಚಾಲಕ ಹಾಗೂ ಪ್ರಯಾಣಿಕ ಸಜೀವ ದಹನ

Share with

ಕಣ್ಣೂರು: ಬಸ್ ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಪ್ರಯಾಣಿಕ ಸಜೀವ ದಹನವಾಗಿರುವ ಘಟನೆ ಕತಿರೂರು 6ನೇ ಮೈಲ್ ಚರ್ಚ್ ಬಳಿ ನಡೆದಿದೆ.

ತಲಶ್ಶೇರಿ-ಕೂತ್ತುಪರಂಪ ರಸ್ತೆಯ ಆರನೇ ಮೈಲಿ ಬಳಿಯ ಮೈದಾನಪಲ್ಲಿಯಲ್ಲಿ ಶುಕ್ರವಾರ ರಾತ್ರಿ 8:30ಕ್ಕೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ಥಳದಲ್ಲಿ ಇದ್ದವರಿಗೆ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದೆ.


Share with

Leave a Reply

Your email address will not be published. Required fields are marked *