ಪುಣೆ: ಮೋಖಿಮ್ ಹೆಸರಿನಲ್ಲಿ ಜಿ-ಮೇಲ್ ಮೂಲಕ ಸಂದೇಶ ಕಳುಹಿಸಿದ್ದು, ದೇಶದ ಅನೇಕ ಸ್ಥಳಗಳಲ್ಲಿ ಸಾವಿಗೆ ಕಾರಣವಾಗುವುದಾಗಿ ಬೆದರಿಕೆ ಹಾಕಿದ್ದಾನೆ. ಸಂದೇಶವನ್ನು ಸ್ವೀಕರಿಸಿದ ವ್ಯಕ್ತಿಯು ಪುಣೆ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವಿದೇಶದಿಂದ ಇ-ಮೇಳ್ ನಲ್ಲಿ ʼನಾನು ಹಲವು ಭಯೋತ್ಪಾದಕ ಸಂಘಟನೆಗಳಿಗೆ ಧನ ಸಹಾಯ ಮಾಡಿದ್ದೇನೆ. ಕೆಲ ಧರ್ಮಗಳ ಜನರನ್ನು ದೇಶದಿಂದ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಂಬ್ ಸ್ಪೋಟಿಸಿ ಹತ್ಯೆಗೈಯ್ಯಲಾಗುತ್ತದೆ. ಇದಲ್ಲದೇ ಭಾರತದ ವಿವಿಧೆಡೆ ಬಾಂಬ್ ಸ್ಪೋಟ ನಡೆಸಲಾಗುತ್ತದೆʼ ಎಂಬುದಾಗಿ ತಿಳಿಸಲಾಗಿದೆ.