ರೋಬೋಟ್ ಪ್ರದರ್ಶನಕ್ಕೆ ಪ್ರಧಾನಿ ಭೇಟಿ – ಮೋದಿಗೆ ಚಹಾ ತಂದುಕೊಟ್ಟ ರೋಬೋಟ್; ವಿಡಿಯೋ ವೈರಲ್

Share with

ರೋಬೊಟ್ ಪ್ರಧಾನಮಂತ್ರಿಗೆ ಚಹಾ ತಂದು ಕೊಡುತ್ತಿರುವುದು.

ಪ್ರಧಾನಿ ನರೇಂದ್ರ ಮೋದಿ ಸೆ.27ರಂದು ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನಮಂತ್ರಿಗೆ ಚಹಾ ತಂದು ಕೊಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಮೋದಿ ಅವರು ಟ್ವಿಟರ್ (ಎಕ್ಸ್‌) ನಲ್ಲಿ ಆಸಕ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರದರ್ಶನದಲ್ಲಿ ವಿವಿಧ ರೋಬೋಟ್ ಸ್ಟಾಲ್‌ಗಳಲ್ಲಿ ಹಲವಾರು ರೋಬೋಟಿಕ್ ಕ್ರಿಯೆಗಳನ್ನು ವೀಕ್ಷಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ಮತ್ತು ಸಿಎಂಗೆ ರೋಬೋಟ್ ಚಹಾವನ್ನು ನೀಡಿದೆ‌.

ರೋಬೋಟ್ ಇಂಜಿನಿಯರ್‌ಗಳು ಪಿಎಂ ಮೋದಿಯವರಿಗೆ ರೋಬೋಟ್‌ಗಳು ಹೇಗೆ ಜೀವನದ ವಿವಿಧ ಹಂತಗಳಲ್ಲಿ ಶಕ್ತರಾಗಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ವಿವರಿಸಿದ್ದಾರೆ. ರೊಬೊಟಿಕ್ಸ್‌ ನೊಂದಿಗೆ ಭವಿಷ್ಯದ ಅಂತ್ಯವಿಲ್ಲದ ಸಾಧ್ಯತೆಗಳನ್ನು ಅನ್ವೇಷಿಸುವುದು! ಎಂದು ಟ್ವಿಟರ್ (ಎಕ್ಸ್) ಪೋಸ್ಟ್‌ ನಲ್ಲಿ ಪಿಎಂ ಮೋದಿ ಬರೆದುಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *