ಪ್ರಸಿದ್ದ ಉದ್ಯಾವರ ಮಾಡ ಕ್ಷೇತ್ರ ವರ್ಷಾವಧಿ ಜಾತ್ರೆ ಸಂಪನ್ನ

Share with

ಮಂಜೇಶ್ವರ :  ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಅಣ್ಣ ತಮ್ಮ ದೈವಗಳ ಕ್ಷೇತ್ರದ  ಮೇ ೯ ರಂದು ಆರಂಭಗೊಂಡು ಕಳೆದ ೫ ದಿನಗಳಲ್ಲಾಗಿ ನಡೆದ ಜಾತ್ರೆ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ  ಮಂಗಳವಾರ ಸಮಾಪ್ತಿಗೊಂಡಿತು. ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ ೮೦೦ va  ವರ್ಷ ಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳ ರ‍್ಷಾವಧಿ ಉತ್ಸವಕ್ಕೆ ಈ ಸಲ ಎಲ್ಲಾ  ವರ್ಷ ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದು ವಿಶೇಷವಾಗಿತ್ತು.
ಎಲ್ಲಾ ವರ್ಷ ಸಂಪ್ರದಾಯದಂತೆ ಕಟ್ಟೆಯ ಒಂದು ಭಾಗದಲ್ಲಿ ಹಿಂದೂ ಬಾಂಧವರು ಹಾಗೂ ಇನ್ನೊಂದು ಭಾಗದಲ್ಲಿ ಮುಸಲ್ಮಾನರು ಕುಳಿತು ಕೊಂಡು ಉತ್ಸವವನ್ನು ವೀಕ್ಷಿಸಿದರು.ಎರಡು ದಿನಗಳಲ್ಲಿ ನಡೆದ ಬಂಡಿ ಉತ್ಪವ ವೀಕ್ಷಿಸಲು ಜನ ಸಾಗರವೇ ಹರಿದು ಬಂದಿತ್ತು. ನೂತನ ಷಟ್ಪಥ ರಸ್ತೆ ಆರಂಭಗೊಂಡ ಬಳಿಕ ಭಕ್ತಾಭಿಮಾನಿಗಳು ಕಿಲೋ ಮೀಟರುಗಳ ತನಕ ನಡೆದು ಕೊಂಡೇ ಬರುವ ದೃಶ್ಯ ಕಂಡು ಬಂತು.
ಎಲ್ಲಾ  ವರ್ಷ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭಕ್ತಾಭಿಮಾನಿಗಳು ಚದುರಿ ಹೋಗುತ್ತಿದ್ದರೂ ಈ ಸಲ ಮಳೆ ಸುರಿಯದೆ ಇರುವ ಕಾರಣ ಭಕ್ತಾಭಿಮಾನಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿತ್ತು.ಅಣ್ಣ ತಮ್ಮ ದೈವಗಳ ನೇಮದ ಬಳಿಕ ಕೊನೆಯ ಬಂಡಿ ಉತ್ಸವದ ಬಳಿಕ ಸುಡು ಮದ್ದು  ಪ್ರದರ್ಶನ ಕೂಡಾ ನಡೆಯಿತು.
ಉತ್ಸವದ ಭಾಗವಾಗಿ ಕುಂಜತ್ತೂರು ಅಂಡರ್ ಪಾಸಿನಲ್ಲಿ ವಾಹನ ದಟ್ಟನೆಯಿಂದ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾದ ಹಿನ್ನೆಲೆಯಲ್ಲಿ ಉತ್ಸವದ ಎಲ್ಲಾ ದಿನಗಳಲ್ಲೂ ಸ್ಥಳೀಯ ಸಮಾಜ ಸೇವಕರಾದ ಅಕ್ಟರ್ ಹಾಗೂ ಸಮದ್ ರವರ ನೇತೃತ್ವದಲ್ಲಿ ವಾಹನ ಸಂಚಾರ ಸುಗಮ ಗೊಳಿಸಿ ಹಿಂದೂ ಮುಸ್ಲಿಂ ಸಾಮರಸ್ಯತೆಯನ್ನು ಗಟ್ಟಿ ಗೊಳಿಸುವ ದೃಶ್ಯ ಕೂಡಾ ಕಂಡು ಬಂತು. [


Share with

Leave a Reply

Your email address will not be published. Required fields are marked *