
ಮಂಗಲ್ಪಾಡಿ: ಪ್ರತಾಪನಗರ ಬೀಟಿಗದ್ದೆಯಲ್ಲಿ ಗ್ರಾಮಸ್ಥರು ಹಾಗೂ ತವರವಾಡು ಮನೆಗೆ ಸಂಬAಧಪಟ್ಟವರು ಸೇರಿಕೊಂಡು ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಕೊರಂಟಿ ಮುಗೇರು ತರವಾಡು ದೈವದ ಸನ್ನಿಧಿಯ ವಿಜ್ಞಾಪನಾ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ.ಪಿ ವಲ್ಸರಾಜ್‌ರವರು ಮಂಗಲ್ಪಾಡಿ ತರವಾಡು ಮನೆಯ ಯಜಮಾನಿ ಸುಫಲಚಂದ್ರ ನಾಯಕ್ ರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಸಮಿತಿ ಉಪಾಧ್ಯಾಕ್ಷ ಆನಂದ ಅಡ್ಕತ್ತಬೈಲು, ತರವಾಡು ಗುರಿಕ್ಕಾರ ಜಯಕರ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ತೂಮಿನಾಡು ಹಾಗೂ ತರವಾಡಿನ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು