ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾ.24ರಂದು ನಡೆಯುವ ನವಗ್ರಹ ಪ್ರತಿಷ್ಟೆ ಹಾಗೂ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದ ಸಿದ್ದತೆಗಳು ಭರದಿಂದ ನಡೆಯುತ್ತಿದೆ.
ಇದರ ಅಂಗವಾಗಿ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಮಧೂರು, ಎಡನೀರು ಸಹಿತ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯಲ್ಲಿ ಸಲ್ಲಿಸಿ, ಆಶ್ರಮದಲ್ಲಿ ಕುಟ್ಟಿ ಮಾಡಿದ ಅಕ್ಕಿಯನ್ನು ನೈವೇದ್ಯಕ್ಕೆ ಸಮರ್ಪಿಸಲಾಯಿತು.
ಜೊತೆಗೆ ಯಾಗ ಸಮಿತಿಯ ಪದಾಧಿಕಾರಿಗಳು ಉಪಸ್ಥಿತಿತರಿದ್ದರು. ಆಶ್ರಮದಲ್ಲಿ ಯಾಗದ ಸಿದ್ದತೆಯ ಹಿನ್ನೆಲೆಯಲ್ಲಿ ಮಾತೆಯರ ಸಹಿತ ಕಾರ್ಯಕರ್ತರು ದಿನಪೂರ್ತಿ ಶ್ರಮದಾನದ ಮೂಲಕ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಚಪ್ಪರ, ಯಾಗದ ಕುಂಡ ಸಹಿತ ವಿವಿಧ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.