ಚಳಿಗಾಲದಲ್ಲಿ ನಿಮ್ಮ ಹೃದಯ ಜೋಪಾನ..ಇಲ್ಲಿದೆ ವೈದ್ಯರ ಸಲಹೆ

Share with

ಚಳಿಗಾಲದ ಸಮಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚು. ಅದರಲ್ಲೂ ಮಧ್ಯವಯಸ್ಸಿನವರು ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚಾಗಿ ಒಳಗಾಗುತ್ತಾರೆ. ಅದಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ವೈದ್ಯರು ನೀಡಿದ ಮಾಹಿತಿ ಇಲ್ಲಿದೆ.

ಕಾರಣಗಳು

1.ಚಳಿಗಾಲದಲ್ಲಿ ಶೇ 10 ರಿಂದ15ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಈ ವೇಳೆ ರಕ್ತ ಮಂದವಾಗಿದ್ದು, ನರಗಳು ಸಂಕುಚಿತವಾಗಿರುತ್ತವೆ. ರಕ್ತ ಸಂಚಾರ ನಿಧಾನವಾಗುವುದರಿಂದ ಹೃದಯಕ್ಕೆ ಹೆಚ್ಚು ಒತ್ತಡವಾಗಿ ಹೃದಯಘಾತಕ್ಕೆ ಕಾರಣವಾಗುತ್ತದೆ.

2 ಚಳಿಯಿಂದ ದೇಹವನ್ನು ಬೆಚ್ಚಗಿಡಲೆಂದು ಧೂಮಪಾನ, ಮದ್ಯಪಾನ ಮಾಡುವುದು ಹೃದಯಘಾತಕ್ಕೆ ಕಾರಣವಾಗಿದೆ.

3 ಚಳಿಯಲ್ಲಿ ದೇಹದ ಚಲನವಲನ ಕಡಿಮೆ ಇರುವುದರಿಂದ, ನಿರಂತರ ವ್ಯಾಯಾಮ ಮಾಡದೆ ಇರುವುದು.

4 ಮೊದಲೇ ಹೃದಯ ಸಂಬಂಧಿ ಕಾಯಿಲೆಗಳು ಇದ್ದರೆ, ಚಳಿಗಾಲದ ವೇಳೆ ಹೃದಯಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

5 ಶ್ವಾಸಕೋಶದಲ್ಲಿ ಸೋಂಕು, ಆಮ್ಲಜನಕದ ಕೊರತೆ, ಅಭ್ಯಾಸವಿಲ್ಲದೇ ಒಂದೇ ಬಾರಿಗೆ ಭಾರ ಎತ್ತುವುದು ಕೂಡ ಹೃದಯಘಾತಕ್ಕೆ ಕಾರಣವಾಗಿದೆ.

6 ಅತಿಯಾದ ಜಂಕ್ ಫುಡ್ ಸೇವನೆ

ಲಕ್ಷಣಗಳು

ಉಸಿರು ಕಟ್ಟುವಿಕೆ

ತಲೆ ಸುತ್ತು

ಅಜೀರ್ಣ

ಭುಜ, ದವಡೆ ನೋವು

ಅತಿಯಾಗಿ ಬೆವರುವುದು

ನಿದ್ರಾಹೀನತೆ

ಪರಿಹಾರ

ಆರೋಗ್ಯಕರ ಆಹಾರ ಸೇವೆನೆ

ಲಘು ವ್ಯಾಯಾಮ ಮಾಡುವುದು

ದಿನಕ್ಕೆ 3ರಿಂದ4 ಲೀಟರ್ ನೀರು ಕುಡಿಯುವುದು

ರಕ್ತದ ಒತ್ತಡ ಹೆಚ್ಚಿದ್ದರೆ ಉಪ್ಪಿನಾಂಶವನ್ನು ಕಡಿಮೆ ಸೇವನೆ ಮಾಡಬೇಕು

ಇಬ್ಬನಿ ಇರುವ ಜಾಗದಲ್ಲಿ ಜಾಸ್ತಿ ಓಡಾಡದಿರುವುದು

ಮದ್ಯಪಾನ, ಧೂಮಪಾನ ನಿಯಂತ್ರಿಸಬೇಕು

ಹಣ್ಣು, ತರಕಾರಿಗಳನ್ನು ಸೇವನೆ ಮಾಡಬೇಕು

ಇತರೆ ಆರೋಗ್ಯ ಸಮಸ್ಯೆಗೆ ವೈದ್ಯರು ಶಿಫಾರಸ್ಸು ಮಾಡಿದ ಔಷಧಿಗಳನ್ನು ತೆಗೆದುಕೊಳ್ಳಬೇಕು.


Share with

Leave a Reply

Your email address will not be published. Required fields are marked *