ಮಂಜೇಶ್ವರ: ಮಂಜೇಶ್ವರ ಜoಕ್ಷನ್, ರೈಲು ನಿಲ್ದಾಣ ಸಂಪರ್ಕ, ಅಂಡರ್ ಪಾಸ್ ಗಾಗಿ ಮಂಜೇಶ್ವರದ ಜನತೆಯ ಬೇಡಿಕೆ ಗಳಿಗೆ ಸ್ಪಂದಿಸದ ಹೆದ್ದಾರಿ ಅಧಿಕಾರಿಗಳಿಗೆ, ಜನಪ್ರತಿನಿದಿನಗಳ ಅನಸ್ಥೆ ವಿರುದ್ಧ ಬೇಡಿಕೆ ಗಳಿಗೆ ಸ್ಪಂದಿಸುವಂತೆ ಅಗ್ರಹಿಸಿ ಕಳೆದ ನೂರು ದಿನಗಳಿಂದ ಮಂಜೇಶ್ವರ. ಹೆದ್ದಾರಿಯಲ್ಲಿ ಪ್ರತಿಭಟಿಸುವ ಹೆದ್ದಾರಿ ಹೋರಾಟ ಸಮಿತಿ ಮಂಜೇಶ್ವರ ನೇತೃತ್ವದಲ್ಲಿ 2.6.2024 ರಂದು ವಿಶಿಷ್ಟ ಪ್ರತಿಭಟನೆ ನಡೆಸಲಾಯಿತು.ಹೆದ್ದಾರಿಯಲ್ಲಿ ಉರುಳು ಸೇವೆ, ಹೆದ್ದಾರಿ ಯಲ್ಲಿ ನೂರಾರು ಪ್ರತಿಭಟನ ಕಾರ್ಯಕ್ರಮ ಉರುಳಿ ಪ್ರತಿಭಟನೆ ವ್ಯಕ್ತಪಡಿಸಿದರು,ಬೇಡಿಕೆಗೆ ಸ್ಪಂದಿಸದೆ ಇದ್ದರೆ ಪ್ರತಿಭಟನೆ ಕಾವು ಇನ್ನು ತೀವ್ರ ಗೊಳಿಸಸುವುದಾಗಿ ಪ್ರತಿಭಟನ ನಿರತರು ಅಗ್ರಹಿಸಿದರು.ಹೋರಾಟ ಸಮಿತಿ ಅಧ್ಯಕ್ಷ ಝಕರಿಯ ಮಂಜೇಶ್ವರ ನೇತೃತ್ವದಲ್ಲಿ, ಮಾಡ ಸಂಜೀವ ಶೆಟ್ಟಿ ಅದ್ಯಕ್ಷತೆಯಲ್ಲಿ ಪ್ರತಿಭಟಸಲಾಯಿತು.ಮುಖಂಡರಾದ .ಎಸ್.ಎಂ ಬಶೀರ್ ಉದ್ಯಾವರ ,ಆದರ್ಶ ಬಿ. ಎಂ, ಹಸೈನಾರ್ , ಅಶ್ರಫ್ ಬಡಾಜೆ, ಮೊದಲದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಹಸೈನಾರ್ ಮಂಜೇಶ್ವರ ಸ್ವಾಗತಿಸಿ ವಂದಿಸಿದರು.