ಪುತ್ತೂರು: ಕಳೆದ ವಿಧಾನ ಸಭೆಯಲ್ಲಿ ಅರುಣ್ ಪುತ್ತಿಲರವರು ಪಕ್ಷೇತರವಾಗಿ ಸ್ಪರ್ಧಿಸಿ ಅತ್ಯಧಿಕ ಮತ ಪಡೆದು ಮೈಲುಗಲ್ಲು ನಿರ್ಮಾಣ ಮಾಡಿದ್ದರು. ಪುತ್ತಿಲ ಪರಿವಾರ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸ್ಪರ್ಧಿಸಲು ಮುಂದಾಗಿದೆ. ಜು.26ರಂದು ನಿಡ್ಪಳ್ಳಿ ಗ್ರಾ.ಪಂಗೆ ನಡೆಯಲಿರುವ ಉಪ ಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಸಿದ್ದಾರೆ.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರಮುಖರಾದ ಸುಧೀರ್ ರೈ ನೇಸರ ಕಂಪ, ನಗರ ಅಧ್ಯಕ್ಷ ಅನಿಲ್ ತೆಂಕಿಲ , ಕುಮಾರ್ ನರಸಿಂಹ ಭಟ್, ದೇವಸ್ಯ ಶ್ರೀನಿವಾಸ್ ಭಟ್, ಸುರೇಶ್ , ಸತೀಶ್ ಕೆ, ನಾರಾಯಣ ಪಾಟಾಳಿ ಸಹಿತ ಹಲವು ಮಂದಿ ಕಾರ್ಯಕರ್ತರು ನಾಮಪತ್ರ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.