ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 30 ರಂದು “ರಕ್ಷಾಬಂಧನ” ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶೇಖರ ನಾರಾವಿ ಇವರು ರಕ್ಷಾಬಂಧನದ ಮೌಲ್ಯಗಳನ್ನು ತಿಳಿಸಿಕೊಟ್ಟು ಪುಟಾಣಿ ಮಕ್ಕಳ ಕೈಯಲ್ಲಿ ರಕ್ಷೆಯನ್ನು ಕಟ್ಟಿಸಿ, ಸಿಹಿ ತಿಂಡಿ ನೀಡಿ ಮಕ್ಕಳಿಗೆ ಆಶೀರ್ವಾದಿಸಿ, ಮುಂದೆ ಈ ಒಂದು ಪುಟ್ಟ ಸಂಸ್ಥೆಯು ಒಂದು ಉತ್ತಮ ವಿದ್ಯಾಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಿಕೊಟ್ಟರು, ಸಂಸ್ಥೆಯ ಸಂಚಾಲಕರಾದ ಎ.ವಿ ನಾರಾಯಣರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶೇಖರ ನಾರಾವಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಉಮೇಶ್ ಮಳುವೇಲು, ಹಾಗೂ ಸಂಸ್ಥೆಯ ಖಜಾಂಚಿ ವನಿತಾ ಎ.ವಿ., ನಿರ್ದೇಶಕರಾದ ಗಂಗಾಧರ ಗೌಡ ಎ.ವಿ., ಶಿಕ್ಷಕ-ರಕ್ಷಕ ಸಂಘದ ಸದಸ್ಯರಾದ ಪ್ರೇಮಚಂದ್ರ ರವರು, ಸಂಸ್ಥೆಯ ಸಹಾಯಕರಾದ ನಾರಾಯಣ ಕುಲಾಲ್ , ಭುವನೇಶ್ವರಿ, ಅಶ್ವಿನಿ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತಿಯಲ್ಲಿದ್ದರು.
ಶಾಲೆಯ ಪುಟಾಣಿಯರಾದ ನಿಷ್ಕಾ, ತನಿಷ್ಕ ಮತ್ತು ಶಿವಾನಿ ಇವರು ಪ್ರಾರ್ಥನೆ ನಡೆಸಿದರು, ಸಂಸ್ಥೆಯ ಪ್ರಾಂಶುಪಾಲೆ ಉಷಾ ಕಿರಣ ಕೆ.ಯಸ್ ಇವರು ಅತಿಥಿಯರನ್ನು ಸ್ವಾಗತಿಸಿದರು, ಸಂಸ್ಥೆಯ ಶಿಕ್ಷಕಿಯರಾದ ವನಿತಾ ವಂದಿಸಿದರು, ಯಶುಭ ರೈ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.