ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದೆವು: ಹಮಾಸ್‌ ಉಗ್ರ ಸ್ಫೋಟಕ ಹೇಳಿಕೆ

Share with

ಇಸ್ರೇಲ್‌ ಮೇಲಿನ ತಮ್ಮ ಭಯಾನಕ ದಾಳಿಯ ಕ್ರೂರತೆ ಹೇಗಿತ್ತು ಎಂದು ಸೆರೆಸಿಕ್ಕ ಉಗ್ರ ಬಹಿರಂಗಪಡಿಸಿದ್ದಾನೆ.

ಜೆರುಸಲೇಂ: ಕಳೆದ ಶನಿವಾರ ನಾವು ಇಸ್ರೇಲ್‌ ಮೇಲೆ ದಾಳಿ ನಡೆಸಿದಾಗ ಅಲ್ಲಿ ನಮಗೆ ಸಿಕ್ಕ ಸಿಕ್ಕ ಯುವತಿಯರ ಮೇಲೆ ಅತ್ಯಾಚಾರ ಮಾಡಿದೆವು. ಮಕ್ಕಳು, ಶಿಶುಗಳು, ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ನಮ್ಮ ಕಣ್ಣಿಗೆ ಬಿದ್ದ ಎಲ್ಲರನ್ನೂ ನಾವು ಕೊಂದು ಹಾಕಿದೆವು. ಅವರ ತಲೆ ಕತ್ತರಿಸಿದೆವು ಇದು ಇಸ್ರೇಲ್‌ ಮೇಲಿನ ತಮ್ಮ ಭಯಾನಕ ದಾಳಿಯ ಕ್ರೂರತೆ ಹೇಗಿತ್ತು ಎಂದು ಸೆರೆಸಿಕ್ಕ ಉಗ್ರನೋರ್ವ ಇಸ್ರೇಲಿ ಪಡೆಯ ಮುಂದೆ ಹೇಳಿದ ವೀಡಿಯೋವೊಂದು ಈಗ ಸೋರಿಕೆಯಾಗಿದೆ.

ಇಸ್ರೇಲಿ ಪಡೆಗಳಿಗೆ ಸೆರೆಸಿಕ್ಕ ಓರ್ವ ಹಮಾಸ್‌ ಉಗ್ರ ವಿಚಾರಣೆ ವೇಳೆ ಈ ಭಯಾನಕ ಅಂಶಗಳನ್ನು ಬಹಿರಂಗಪಡಿಸಿದ್ದಾನೆ. ಸೋರಿಕೆಯಾದ ವೀಡಿಯೋನಲ್ಲಿ ತನ್ನ ಹೆಸರು ಮೊಹಮ್ಮದ್‌ ನಹೇದ್‌ ಅಹ್ಮದ್‌ ಎಲ್‌-ಅರ್ಷಾ. ತಾನು ಗಾಜಾಪಟ್ಟಿಯ ರಫಾಹ್‌ ನಿವಾಸಿ ಎಂದು ಹೇಳಿಕೊಂಡಿರುವ ಉಗ್ರ ಜನರ ತಲೆಗಳನ್ನು ಕತ್ತರಿಸಿ ನೆಲದ ಮೇಲೆ ಎಸೆದೆವು. ಎದುರಿಗೆ ಬಂದವರನ್ನು ಚೆಂಡಾಡಿದೆವು. ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದೆವು ಎಂದೂ ಉಗ್ರ ಹೇಳಿದ್ದಾನೆ.

LEAKED FOOTAGE: Interrogation of Hamas terrorist captured by IDF security in which he admits both beheadings and rape. Disturbing!


Share with

Leave a Reply

Your email address will not be published. Required fields are marked *