
ಕೊಂಡೆವೂರು ಮಠದಲ್ಲಿ ಧಾರ್ಮಿಕ ಉಪನ್ಯಾಸ
ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 21 ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆಯ ಪ್ರಯುಕ್ತ ಕೊಂಡೆವೂರು ಮಠದ ಶ್ರೀ ಗಾಯತ್ರೀ ಮಂಟಪದಲ್ಲಿ ದಿನಾಂಕ 25.08.2024 ರಂದು ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ವಾನ್ ಸುಬ್ರಹ್ಮಣ್ಯ ಅವಧಾನಿಗಳು, ಗುಂಡಿಬೈಲು, ಉಡುಪಿ ಇವರು ‘ನವಧಾ ಭಕ್ತಿ’ ಯ ಬಗ್ಗೆ ಮಹಾಭಾರತ, ರಾಮಾಯಣಗಳನ್ನು ಉಲ್ಲೇಖಿಸುತ್ತಾ ಧಾರ್ಮಿಕ ಉಪನ್ಯಾಸ ನೀಡಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ದೇವರನ್ನು ಪೂಜಿಸುವ ನವಧಾ ಭಕ್ತಿಗಳಾದ ಶ್ರವಣಂ, ಸ್ಮರಣಂ, ಕೀರ್ತನಂ, ಅರ್ಚನಂ, ಪಾದಸೇವನ, ವಂದನA, ದಾಸ್ಯಂ, ಸಖ್ಯಂ, ಆತ್ಮನಿವೇದನ ಮುಂತಾದುವುಗಳನ್ನು ಸವಿವರವಾಗಿ ಜನರಿಗೆ ಮನಮುಟ್ಟುವಂತೆ ತಿಳಿಸಿದರು.