
ಉಪ್ಪಳ: ಮಂಗಲ್ಪಾಡಿ ಕೃಷ್ಣನಗರ ಶ್ರೀ ಕೃಷ್ಣ ಭಜನಾ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಜನೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಅಟೋಟ ಸ್ಪರ್ಧೆಯನ್ನು ಮಂದಿರದ ಮಾಜಿ ಅಧ್ಯಕ್ಷ ದಯಾನಂದ ಹಾಗೂ ಹಿರಿಯರಾದ ಮಾಧವ.ಎಂ, ವಿಜಯ ಕೆ.ಆರ್, ಶ್ರೀ ಕೃಷ್ಣ ಮಹಿಳಾ ಮಂಡಳಿಯ ಅಧ್ಯಕ್ಷೆ ಭಾಗಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ವಿವಿಧ ಮಂಡಳಿಯವರಿAದ ಭಜನಾ ಕಾರ್ಯಕ್ರಮ ನಡೆಯಿತು.





