ಕೃಷಿಕರಿಗೆ ಹೆಣ್ಣು ಕೊಡಲು ಹಿಂದೇಟು; ಬೇಸತ್ತ ಯುವ ರೈತರಿಂದ ʼಕನ್ಯೆ ಭಾಗ್ಯʼ ಯೋಜನೆ ತರುವಂತೆ ಮು‍ಖ್ಯಮಂತ್ರಿಗೆ ಪತ್ರ

Share with

ಹಾವೇರಿ: ರೈತ ದೇಶದ ಬೆನ್ನೆಲುಬು. ಆದ್ರೆ ಈ ರೈತನಿಗೆ ಈಗ ಸಂಕಷ್ಟ ಎದುರಾಗಿದೆ. ಮದುವೆ ಮಾಡಿಕೊಳ್ಳೋಣ ಅಂದ್ರೆ ಯಾರೂ ಕೂಡಾ ರೈತರಿಗೆ ಹೆಣ್ಣು ಕೊಡಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಸೊತ್ತ ಯುವ ರೈತರು ಕರ್ನಾಟಕ ಸರಕಾರದ ಮೊರೆ ಹೋಗಿದ್ದಾರೆ. ಹಾವೇರಿ ಜಿಲ್ಲೆಯ ಯುವಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ʼಕನ್ಯೆ ಭಾಗ್ಯʼ ಆರಂಭಿಸುವಂತೆ ಬ್ಯಾಡಗಿ ತಾಲೂಕಿನ‌ ಮದುವೆ ಆಗದ ಯುವ ರೈತರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಮನೆಯೊಡತಿಗೆ 2 ಸಾವಿರ ರೂ. ಕೊಡುವ ಮಾದರಿಯಲ್ಲಿ ರೈತರನ್ನು ಮದುವೆಯಾದವರಿಗೂ ಸಹ ಹಣ ನೀಡುವ ಕಾರ್ಯಕ್ರಮ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ರೈತರನ್ನು ಮದುವೆ ಆದ ವಿದ್ಯಾವಂತ ಯುವತಿಯರಿಗೆ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಿ. ಮನೆಯೊಡತಿಗೆ 2 ಸಾವಿರ ರೂ. ಕೊಡುವ ಮಾದರಿಯಲ್ಲಿ ರೈತರನ್ನು ಮದುವೆ ಆದವರಿಗೂ ಹಣ ಕೊಡಬೇಕು. ಇಂತಹ ಕಾರ್ಯಕ್ರಗಳನ್ನೊಳಗೊಂಡ ಕನ್ಯಾ ಭಾಗ್ಯ ಯೋಜನೆ ಜಾರಿಗೆ ತರಬೇಕೆಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ‌ ಮದುವೆ ಆಗದ ಯುವ ರೈತರು ಪತ್ರದ ಮೂಲಕ ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *