ಉಡುಪಿ: ಟ್ರಾನ್ಸ್ಫಾರ್ಮರ್ ಹತ್ತಿದ ಯುವಕನ ರಕ್ಷಣೆ; ಆಸ್ಪತ್ರೆಗೆ ದಾಖಲು

Share with

ಉಡುಪಿ: ಉಡುಪಿ ಬಲಾಯಿಪಾದೆ ಬಳಿ ಜ.30ರಂದು ಬೆಳಿಗ್ಗೆ ಟ್ರಾನ್ಸ್ಫಾರ್ಮರ್ ಕಂಬ ಹತ್ತಿ ವಿದ್ಯುತ್ ತಂತಿಯನ್ನು ಮುಟ್ಟಲು ಯತ್ನಿಸುತ್ತಿದ್ದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸಾರ್ವಜನಿಕರ ಸಹಕಾರದಿಂದ ರಕ್ಷಿಸಿ ಉಡುಪಿಯ ಬಾಳಿಗ ಆಸ್ಪತ್ರೆಗೆ ದಾಖಲಿಸುವ ಮೂಲಕ ಯುವಕನ ಪ್ರಾಣವನ್ನು ಉಳಿಸಿದ್ದಾರೆ.

ಟ್ರಾನ್ಸ್ಫಾರ್ಮರ್ ಹತ್ತಿದ ಯುವಕನ ರಕ್ಷಣೆ

ರಕ್ಷಿಸಲ್ಪಟ್ಟ ಯುವಕನನ್ನು ಮಂಚಕಲ್ ಹಳೆಯಂಗಡಿ ಪರಿಸರದ ಸೂರಜ್(28) ಎಂದು ಗುರುತಿಸಲಾಗಿದೆ. ವಾರಿಸುದಾರರು ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಈ ಸಂದರ್ಭದಲ್ಲಿ ಮಲ್ಪೆ ಠಾಣೆ ಎಎಸ್ಐ ತನಿಯ ಹಾಜರಿದ್ದರು. ಪ್ರಕರಣದ ಬಗ್ಗೆ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ವಿಶು ಶೆಟ್ಟಿ ಅವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *