ವಿಶ್ವದೆಲ್ಲೆಡೆ ಅಕ್ಕಿ ಬೆಲೆ ಕಳೆದ 15 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ. ಥಾಯ್ಲೆಂಡ್‌ನಲ್ಲಿ ಅಕ್ಕಿ ಉತ್ಪಾದನೆ ಕುಸಿದಿರುವುರಿಂದ ವಿಶ್ವದೆಲ್ಲೆಡೆ ಬೆಲೆ ಏರಿಕೆ ಆಗುತ್ತಿದೆ ಎಂದು ಹೇಳಲಾಗಿದೆ.
ಭಾರತದಲ್ಲೂ ಅಕ್ಕಿಯ ಬೆಲೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ 26kg ಅಕ್ಕಿ ಪ್ಯಾಕೆಟ್ ಬೆಲೆ ಸರಾಸರಿ 1200 ಇತ್ತು. ಆದರೆ ಈಗ ದಿಢೀರ್ ಆಗಿ ಬೆಲೆ ಏರಿಕೆಯಾಗಿರುವ ಬಗ್ಗೆ ವರದಿಯಾಗಿದ್ದು, 71600 ತಲುಪಿದೆ ಎಂದು ಹೇಳಲಾಗಿದೆ.