ಸ್ಯಾಂಡಲ್‌ವುಡ್ ನಟಿ ಅದ್ವಿತಿ ಶೆಟ್ಟಿ ಅವರ ತಂದೆ ನಿಧನರಾಗಿದ್ದಾರೆ. ತಂದೆ ಸಾವಿನ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಓಂ ಶಾಂತಿ ಅಪ್ಪ ಎಂದು ಪೋಸ್ಟ್ ಹಾಕಿದ್ದಾರೆ.
ನಟ ಯಶ್ ನಟಿಸಿರುವ ಸಿನಿಮಾ Mr. and Mrs. ರಾಮಾಚಾರಿಯಲ್ಲಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಅಲ್ಲದೇ, ಐರಾವನ್ ಹಾಗೂ ಸುಳಿ ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ತಂದೆಯನ್ನು ಕಳೆದುಕೊಂಡ ಅದ್ವಿತಿಗೆ ನೆಟ್ಟಿಗರು ಸಮಾಧಾನ ಹೇಳಿದ್ದಾರೆ.