
ಉಪ್ಪಳ: ಸ್ಕೂಟರ್ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹೊಂಡಕ್ಕೆ ಮಗುಚಿ ಬಿದ್ದು ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಉಪ್ಪಳ ಮೂಸೋಡಿ ನಿವಾಸಿ ಸರ್ಫುದ್ದೀನ್ ರವರ ಪುತ್ರ ಉಪ್ಪಳ ಗೇಟ್‌ನಲ್ಲಿ ಅಟೋರಿಕ್ಷಾ ಚಾಲಕ ಮೊಹಮ್ಮದ್ ಸಪ್ರಾಸ್ [೪೦] ಮೃತಪಟ್ಟ ವ್ಯಕ್ತಿ. ಇನ್ನೋರ್ವ ಮೂಸೋಡಿ ನಿವಾಸಿ ಮಹಮ್ಮದ್
ಮುಸ್ತಫ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಶನಿವಾರ ರಾತ್ರಿ ಇಬ್ಬರು ಸ್ಕೂಟರ್‌ನಲ್ಲಿ ತಲಪಾಡಿ ಭಾಗದಿಂದ ಮನೆಗೆ ತೆರೆಳುತ್ತಿದ್ದಾಗ ಮಂಜೇಶ್ವರ ಬಳಿಯ ಹತ್ತನೇ ಮೈಲು ಪರಿಸರದ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಪರಿಸರದ ಹೊಂಡಕ್ಕೆ ಬಿದ್ದಿದೆನ್ನಲಾಗಿದೆ. ಅಪಘಾತದ ಬಗ್ಗೆ ಸ್ಥಳೀಯರ ಗಮನಕ್ಕೆ ಬಂದಿದ್ದು, ಕೂಡಲೇ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಪ್ರಾಝ್ ಮೃತಪಟ್ಟಿದ್ದಾರೆ.





