ಉಪ್ಪಳ: ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಳೆದ ಎಂಟು ದಿನಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿರುವ ವರ್ಷಾವಧಿ ಕ್ಷೇತ್ರೋತ್ಸವ ಜ.30ರಂದು ಸಮಾಪ್ತಿಗೊಳ್ಳಲಿದೆ.

ಜ.30ರಂದು ಬೆಳಿಗ್ಗೆ 7.30ಕ್ಕೆ ನಿತ್ಯಪೂಜೆ, 8ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಪ್ರೋಕ್ಷಣೆ, ಪ್ರಸಾದ ವಿತರಣೆ, ದೈವಗಳ ಭಂಡಾರ ಏರುವುದು, ಅನ್ನಸಂತರ್ಪಣೆ, ಸಂಜೆ 4.30ರಿಂದ ಪರಿವಾರ ದೈವಗಳಾದ ಗುಳಿಗನಿಗೆ ಕೋಲ, ಸಂಜೆ 5.30ರಿಂದ ರಕ್ತೇಶ್ವರೀ ನೇಮ, ರಾತ್ರಿ 8ಕ್ಕೆ ಭಂಡಾರ ಇಳಿಯುವುದು, ಪೂಜೆ, ಸಂತರ್ಪಣೆ ನಡೆಯಲಿದೆ.