
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾ. ಪ್ರಮುಖ ಕಾರಣಿಕ ದೈವಸ್ಥಾನವಾದ ಪಣೋಲಿಬೈಲಿನಲ್ಲಿ ದೈವದ ಸೇವೆಗೆ ದರವನ್ನು ಹೆಚ್ಚಳಗೊಳಿಸಲಾಗಿದೆ. ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನ ಕರ್ನಾಟಕದ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.
ಹೀಗಿದೆ ಹೊಸ ದರಗಳ ವಿವರ:
ಈ ದೈವಸ್ಥಾನದಲ್ಲಿ ದೈವದ ಅಗೆಲು ಸೇವೆ, ದೈವದ ನೇಮದ ಸೇವೆಗೆ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ. 25 ರೂಪಾಯಿ ಇದ್ದ ಅಗೆಲು ಸೇವೆ ಚೀಟಿಯ ಬೆಲೆಯನ್ನು ಏಕಾಏಕಿ 50 ರೂಪಾಯಿಗೆ ಏರಿಕೆ ಮಾಡಲಾಗಿದೆ. 3000 ರೂಪಾಯಿ ಇದ್ದ ದೈವದ ನೇಮದ ಶುಲ್ಕವನ್ನು 5000 ಕ್ಕೆ ಏರಿಕೆ ಮಾಡಲಾಗಿದೆ. ಉಚಿತವಾಗಿದ್ದ ವಾಹನ ಪೂಜೆ ಸೇವೆಗೆ 75 ರೂಪಾಯಿ ಶುಲ್ಕ ವಿಧಿಸಲಾಗಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.