ಶಿಶಿಲ: ವರುಣನ ಆರ್ಭಟ! ಶಿಶಿಲ ದೇವಸ್ಥಾನ ಜಲಾವೃತ

Share with

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ನದಿಗಳು ತುಂಬಿ ಹರಿಯುತ್ತಿದ್ದು, ಕಪಿಲಾ ನದಿಯು ತಾಲ್ಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ.

ದೇವಾಲಯದೊಳಗೆ ನೀರು ನುಗ್ಗಿದೆ. ಜೂನ್ 22 ರಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಸ್ತೆಗಳು ಸರೋವರಗಳಾಗಿ ಮಾರ್ಪಟ್ಟಿದ್ದು, ಎಲ್ಲೆಡೆ ನೀರೆ ಕಾಣುತ್ತಿದೆ.


Share with