ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಂಟ್ವಾಳ ತಾಲೂಕಿನ
ಕೊಡಂಬೆಟ್ಟು ಗ್ರಾಮದ ಮುಖ್ಯಪ್ರಾಣ ದೇವಸ್ಥಾನದ ದ್ವಾರದಿಂದ ದೇವಸ್ಥಾನದವರೆಗೆ ರಸ್ತೆಯ ಅಕ್ಕಾ ಪಕ್ಕ ಬೆಳೆದ ಹುಲ್ಲು ಗಿಡಗಂಟಿಗಳನ್ನು ಕಡಿದು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಾಡಿದರು.
ಈ ಶ್ರಮದಾನ ಕಾರ್ಯಕ್ರಮಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಭೇಟಿ ನೀಡಿ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹಿಸಿದರು.
ಶ್ರಮದಾನ ಕಾರ್ಯಕ್ರಮದಲ್ಲಿ ದೇವಸ್ಥಾನದ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಉರುಡಾಯಿ, ಜೊತೆ ಕಾರ್ಯದರ್ಶಿ ದಿವಾಕರ್ ಸದಸ್ಯರಾದ ಮಧುಶ್, ಶೌರ್ಯ ಘಟಕ ಸಂಯೋಜಕಿ ರೇಖಾ. ಪಿ. ಘಟಕ ಪ್ರತಿನಿಧಿ ಪ್ರವೀಣ್ , ಸದಸ್ಯರಾದ ಸಂಪತ್ ಶೆಟ್ಟಿ, ಮಹಾಬಲ ರೈ ನಾರಾಯಣ್ ಶೆಟ್ಟಿ ನಾರಾಯಣ ಪೂಜಾರಿ ಮೋಹನಂದ ರಮೇಶ್ ರೋಹಿತ್, ಲಕ್ಷ್ಮಣ್ , ಶಶಿಕಲ, ಅಶೋಕ್ ಬೊಲ್ಮಾರು,ಬ ದಿನೇಶ್ ಭಾಗವಹಿಸಿದ್ದರು.