‘ಬಿಗ್ ಬಾಸ್‌’ ಶೋನಿಂದ ಹೊರಬಂದ ‘ಫೈರ್ ಬ್ರ್ಯಾಂಡ್‌’ ಚೈತ್ರಾ ಕುಂದಾಪುರ! ಕಾರಣವೇನು?

Share with

ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ‘ಅಯ್ಯೋ, ಅವರನ್ನು ಸಡನ್ ಆಗಿ ಎಲಿಮಿನೇಟ್ ಮಾಡಿದ್ರಾ’ ಅನ್ನೋ ಪ್ರಶ್ನೆ ಮೂಡಿದರೆ, ಅದರಲ್ಲಿ ಅಚ್ಚರಿ ಏನಿಲ್ಲ. ಹಾಗಂತ, ಚೈತ್ರಾ ಕುಂದಾಪುರ ಎಲಿಮಿನೇಟ್ ಏನೂ ಆಗಿಲ್ಲ. ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಕ್ಕೆ ಒಂದು ಕಾರಣ ಇದೆ.

ಏನದು ಕಾರಣ?

‘ಬಿಗ್ ಬಾಸ್‌’ ಶೋಗೆ ಹೋಗುವುದಕ್ಕೂ ಮುನ್ನವೇ ಚೈತ್ರಾ ಕುಂದಾಪುರ ಒಂದು ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ 5 ಕೋಟಿ ರೂ. ಹಣ ಪಡೆದು ವಂಚಿಸಿರುವ ಆರೋಪ ಚೈತ್ರಾ ಕುಂದಾಪುರ & ಗ್ಯಾಂಗ್ ಮೇಲಿದೆ. ಹಾಗಾಗಿ, ಇಂದು (ಡಿ.3) ವಿಚಾರಣೆಗೆ ಅವರು ಹಾಜರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಾರೆಂಟ್ ಜಾರಿ ಮಾಡಿದ್ದರ ಹಿನ್ನೆಲೆಯಲ್ಲಿ ಸೀದಾ ಬಿಗ್ ಬಾಸ್ ಮನೆಯಿಂದ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದರು ಚೈತ್ರಾ ಕುಂದಾಪುರ.

ವಿಚಾರಣೆ ಮುಂದೂಡಿಕೆ

ಚೈತ್ರಾ ಕುಂದಾಪುರ ಸೇರಿದಂತೆ ಒಟ್ಟು ಮೂವರು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ನಂತರ 2025ರ ಜನವರಿ 13ಕ್ಕೆ ವಿಚಾರಣೆಯನ್ನು 1ನೇ ACMM ಕೋರ್ಟ್ ಮುಂದೂಡಿದೆ. ಬಿಗ್ ಬಾಸ್ ಮನೆಯಿಂದ ಸೀದಾ ಕೋರ್ಟ್‌ಗೆ ಬಂದಿದ್ದ ಚೈತ್ರಾ ಕಣ್ಣಿಗೆ ಕಪ್ಪು ಕನ್ನಡಕವನ್ನು ಹಾಕಿಕೊಂಡಿದ್ದರು ಜೊತೆಗೆ ಮಾಸ್ಕ್ ಅನ್ನು ಧರಿಸಿದ್ದರು. ವಾರೆಂಟ್ ರೀಕಾಲ್ ಮಾಡಿಸಿಕೊಂಡ ಬಳಿಕ ಪುನಃ ಅವರು ಬಿಗ್ ಬಾಸ್ ಮನೆಯತ್ತ ಹೊರಟಿದ್ದಾರೆ.


Share with

Leave a Reply

Your email address will not be published. Required fields are marked *