ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ ಸಿದ್ದರಾಮಯ್ಯರ ಕನಸಿನ ಮನೆ !

Share with

ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಐಷಾರಾಮಿ ಮನೆಯ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಮೈಸೂರು ಜಿಲ್ಲೆಯ ಕುವೆಂಪುನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿ ಅವರ ಮನೆ ನಿರ್ಮಾಣವಾಗುತ್ತಿದೆ.

ಸಿದ್ದರಾಮಯ್ಯ ರ ಮನೆ 85/120 ವಿಸ್ತೀರ್ಣದಲ್ಲಿ ನಿರ್ಮಾಣ ಆಗುತ್ತಿದೆ. ಬೆಂಗಳೂರು ಮೂಲದ ಕಂಪನಿ ಈ ಮನೆಯನ್ನು ನಿರ್ಮಿಸುತ್ತಿದೆ. ಭವ್ಯವಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದೆ. ಸೆಲ್ಲಾರ್, ಗ್ರೌಂಡ್ ಫ್ಲೋರ್, ಫಸ್ಟ್ ಹಾಗೂ ಸೆಕೆಂಡ್ ಫ್ಲೋರ್, ಸೆಂಟ್ರಲೈಸ್ಡ್ ಏಸಿ ವ್ಯವಸ್ಥೆಯುಳ್ಳ ಬಂಗಲೆ ಇದಾಗಿದೆ. ಬಂಗಲೆ ಪ್ರವೇಶಕ್ಕೆ ಎರಡು ಮುಖ್ಯ ದ್ವಾರಗಳ ವ್ಯವಸ್ಥೆ ಮಾಡಲಾಗಿದ್ದು, ಕಟ್ಟಡದ ಪ್ಲಾಸ್ಟರಿಂಗ್, ವೈರಿಂಗ್ ಹಾಗೂ ವುಡ್‌ವರ್ಕ್ ಪ್ರಗತಿಯಲ್ಲಿದೆ.

ಮಗನ ಪುಣ್ಯತಿಥಿಗೆ ಆಗಮಿಸಿದ್ದ ವೇಳೆ, ಸಿಎಂ ಸಿದ್ದರಾಮಯ್ಯ ಬಂಗಲೆ ವೀಕ್ಷಣೆ ಮಾಡಿದ್ದಾರೆ. ಇಂಜಿನಿಯರ್ ಹಾಗೂ ಅಧಿಕಾರಿಗಳ ಜೊತೆ ಮನೆ ಕಾಮಗಾರಿ ವೀಕ್ಷಣೆ ಮಾಡಿದರು. ಈವರೆಗೆ ಮೈಸೂರಿನಲ್ಲಿ(Mysore) ನಾಲ್ಕು ಬಾರಿ ಸಿಎಂ ಸಿದ್ದರಾಮಯ್ಯ ಮನೆ ಬದಲಿಸಿದ್ದಾರೆ. ಬಾಡಿಗೆ, ಬೆಂಬಲಿಗರು, ಸ್ನೇಹಿತರ ಮನೆಯಲ್ಲೇ  ಸಿದ್ದರಾಮಯ್ಯ ವಾಸ ಮಾಡುತ್ತಿದ್ದಾರೆ. ವಿಜಯನಗರ ಎರಡನೇ ಹಂತ ಬಡಾವಣೆಯಲ್ಲಿ ಸಿದ್ದರಾಮಯ್ಯ ಮೊದಲ ಮನೆ ಇತ್ತು. ಉಪ ಮುಖ್ಯಮಂತ್ರಿ ಆಗಿದ್ದ ವೇಳೆ ಆ ಮನೆಯನ್ನು ಸಿದ್ದರಾಮಯ್ಯ ಮಾರಿದ್ದರು. ನಂತರ ಬೇರೆಯವ ಮನೆಯಲ್ಲೇ ಕಾಲ ಕಳೆದುಕೊಂಡು ಸಿದ್ದರಾಮಯ್ಯ ಬಂದಿದ್ದಾರೆ.


Share with

Leave a Reply

Your email address will not be published. Required fields are marked *