
ಮಂಜೇಶ್ವರ : ನೂತನವಾಗಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಷಟ್ಪಥ ರಸ್ತೆಯ ತೂಮಿನಾಡು ಜಂಕ್ಷನಿನಲ್ಲಿ ಕಾಲು ಸೇತುವೆ ನಿರ್ಮಿಸಲು ರಸ್ತೆ ಕಾಮಗಾರಿ ಗುತ್ತಿಗೆಯ ಯು ಎಲ್ ಸಿ ಸಿ ಕಂಪನಿಯ ಅಧಿಕಾರಿಗಳು ಮಂಗಳವಾರ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.ಶೀಘ್ರದಲ್ಲೇ ಇದರ ಕಾಮಗಾರಿ ಆರಂಭವಾಗಲಿರುವುದಾಗಿ ಕಂಪನಿಯ ವಕ್ತಾರ ಅಜಿತ್ ರವರು ಮಾಹಿತಿ ನೀಡಿದ್ದಾರೆ.ಜನ ಸಂಚಾರ ಹೆಚ್ಚಿರುವ ಈ ಪ್ರದೇಶಗಳಲ್ಲಿ ರಸ್ತೆಯನ್ನು ದಾಟಲು ಜನ ಸಾಮಾನ್ಯರಿಗೆ ಸಹಾಯಕವಾಗುವಂತೆ ಪಾದಾಚಾರಿ ಕಾಲು ಸೇತುವೆಗಳನ್ನು ನಿರ್ಮಾಣ ಮಾಡುವಂತೆ ಊರವರೊಂದಿಗೆ ಮೊದಲೇ ಕಂಪನಿ ಒಡಂಬಡಿಕೆಯನ್ನು ಮಾಡಲಾಗಿತ್ತು. ಇದೀಗ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾಮಾನ್ಯ ಜನರು ಭಯ ಭೀತಿಯಿಂದ ರಸ್ತೆಯನ್ನು ದಾಟುತಿದ್ದಾರೆ.
ಕಾಲು ಸೇತುವೆ ನಿರ್ಮಾಣದ ಬಳಿಕ ರಾ.ಹೆದ್ದಾರಿ ಷಟ್ಪಥ ರಸ್ತೆಯನ್ನು ದಾಟುವ ದಾರಿಗಳನ್ನು ಮುಚ್ಚಲಾಗುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.