ಉಪ್ಪಳ: ಉಪ್ಪಳ ಗೇಟ್ ಸಮೀಪದ ಶಾಫಿನಗರ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಜಯರಾಮ.ಯು [೬೩] ನಿಧನರಾದರು. ಭಾನುವಾರ ಬೆಳಿಗ್ಗೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಕೂಡಲೇ ಉಪ್ಪಳದ ಖಾಸಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು.

ಇವರು ಕೇರಳ ಗ್ರಾಮೀಣ ಬ್ಯಾಂಕ್ ಬಂದ್ಯೋಡು ಶಾಖೆಯಲ್ಲಿ ಕ್ಲರ್ಕ್ ಆಗಿ ನಿವೃತ್ತಿಹೊಂದಿದ್ದರು. ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಸೇವಾ ಸಮಿತಿ ಮಾಜಿ ಲೆಕ್ಕಪರಿಶೋಧಕರಾಗಿದ್ದರು. ಮೃತರು ಪತ್ನಿ ವಾಣಿಶ್ರೀ, ಮಕ್ಕಳಾದ ನಿತಿನ್, ಗೀತಾ, ಅಳಿಯ ವಿವೇಕ್, ಸೊಸೆ ಅಕ್ಷತ, , ಸಹೋದರಿ, ಸಹೋದರರಾದ ಸುಮಿತ್ರ, ಕಲಾವತಿ, ಮೋಹಿನಿ, ಮಾಧವ, ಗೋಪಾಲಕೃಷ್ಣ, ಸೀತಾರಾಮ, ಹಾಗೂ ಅಪಾರ ಬಂಧುಗಳು, ಹಿತೈಷಿಗಳನ್ನು ಅಗಲಿದ್ದಾರೆ. ತಂದೆ ನಾರಾಯಣ ವೈದ್ಯರ್, ತಾಯಿ ಸುಗಂಧಿ ಈ ಹಿಂದೆ ನಿಧನರಾಗಿದ್ದಾರೆ. ಮನೆಗೆ ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಅಚ್ಚಮ್ಮಾರರು, ಗುರಿಕಾರರು, ಪದಾಧಿಕಾರಿಗಳು ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು. ನಿಧನಕ್ಕೆ ಉಪ್ಪಳ ಶ್ರೀ ಭಗವತೀ ಸೇವಾ ಸಮಿತಿ, ಶ್ರೀ ಭಗವತೀ ಯುವಜನ ಸಂಘ, ಶ್ರೀ ಭಗವತೀ ಮಹಿಳಾ ಸಂಘ ಸಂತಾಪ ಸೂಚಿಸಿದ್ದಾರೆ.