ಕಲ್ಲಡ್ಕ: ಮಜಿ ಸರಕಾರಿ ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ

Share with

ಕಲ್ಲಡ್ಕ: ಯಾವುದೇ ಅಭಿಲಾಷೆ ಇಲ್ಲದೆ ವಿದ್ಯೆಗೆ ಮಾಡುವ ಸಹಾಯ ದೇವರು ಮೆಚ್ಚುತ್ತಾನೆ. ಅದೇ ರೀತಿ ಮಾಡಿದ ಸಹಾಯವನ್ನು ಹೇಳಿಕೊಳ್ಳದೆ ಎಲೆ ಮರೆಯ ಕಾಯಿಯಾಗಿ ಸದಾ ಹಲವಾರು ಕೆಲಸ ಕಾರ್ಯಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿರುವವರು ಕಲ್ಲಡ್ಕ ಮ್ಯೂಸಿಯಂ ಮಾಲಕ ಯಾಶೀರ್ ಕಲ್ಲಡ್ಕ ಅವರು ಒಂದು ಉತ್ತಮ ಉದಾಹರಣೆ.

ಸ್ಮಾರ್ಟ್ ಟಿ ವಿಯನ್ನು ಶಾಲೆಗೆ ಹಸ್ತಾಂತರ ಮಾಡಲಾಯಿತು

ತನ್ನ ವಿಶಿಷ್ಟವಾದ ಸಂಗ್ರಹಣ ಕಲೆಯಿಂದ ಪ್ರಖ್ಯಾತಿ ಪಡೆದಿರುವ ಇವರು ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದರೂ ಸಹಾಯ ಮಾಡಬೇಕು ಎನ್ನುವ ಇವರ ಅಭಿಲಾಷೆಯು ಮೆಚ್ಬವಂತದ್ದು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಮಜಿ, ವೀರಕಂಭ ಇಲ್ಲಿ ಕಲ್ಕಡ್ಕ ಮ್ಯೂಸಿಯಂ ನ ಯಾಶೀರ್ ಕಲ್ಲಡ್ಕ ಅವರಿಂದ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಟಿ ವಿಯನ್ನು ಶಾಲೆಗೆ ಹಸ್ತಾಂತರ ಮಾಡಿ, ಶಾಲೆಯ ಪರವಾಗಿ ಯಾಶೀರ್ ಅವರನ್ನು ಅಭಿನಂದಿಸಿದ ಅಭಿಪ್ರಾಯ ಪಟ್ಟರು.

ಶಾಲೆಯ ಪರವಾಗಿ ಯಾಶೀರ್ ಅವರನ್ನು ಅಭಿನಂದಿಸಲಾಯಿತು

ಈ ಸಂದರ್ಭದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ, ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಶಾಲಾಭಿವೃಡಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್, ವಿಟ್ಲ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೂಪಕಲಾ, ಕಲ್ಲಡ್ಕ ಕ್ಲೇಸ್ಟರ್ ಸಿ ಅರ್ ಪಿ ಜ್ಯೋತಿ, ಗೋಳ್ತಮಜಲು ಸರಕಾರಿ ಪ್ರೌಢಶಾಲಾ ಶಿಕ್ಷಕ ಸತ್ಯಶಂಕರ್ ಸರ್, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಸ್ವಾಗತಿಸಿ, ಸಹ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ ವಂದಿಸಿದರು.


Share with

Leave a Reply

Your email address will not be published. Required fields are marked *