ಸೌಜನ್ಯ ಕೊಲೆ ಪ್ರಕರಣ ಕುರಿತು ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಮರು ತನಿಖೆ ಮಾಡಬೇಕೇ ಬೇಡವೇ ಎಂಬುದು ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಲಿದೆ. ಅವಕಾಶ ಇದ್ದರೆ ಮರು ತನಿಖೆ ಆಗಲಿದೆ ಎಂದಿದ್ದಾರೆ.
ಮರುತನಿಖೆ ಬಗ್ಗೆ ನಾನು ವೈಯಕ್ತಿಕವಾಗಿ ಹೇಳಲು ಆಗುವುದಿಲ್ಲ. ಗೃಹ ಸಚಿವರ ಜೊತೆ ಈ ಕುರಿತು ಚರ್ಚಿಸುವೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ವರದಿ ತರಿಸಿಕೊಳ್ಳುತ್ತಿದೆ. ಪ್ರಕರಣದ ವಿಸ್ತ್ರತ ವರದಿಗಾಗಿ ಗೃಹ ಇಲಾಖೆ ಕಾಯುತ್ತಿದೆ ಎಂದು ಹೇಳಿದ್ದಾರೆ.