ರಭಸವಾಗಿ ಬೀಸುತ್ತಿರುವ ಗಾಳಿಯಿಂದ ಬೆಂಕಿ ಇನ್ನಷ್ಟು ವ್ಯಾಪಿಸುತ್ತಿದೆ. ಈ ಕಾಳ್ಗಿಚ್ಚು ಯಮಸ್ವರೂಪಿಯಾಗಿದ್ದು, ಜೀವಗಳ ಜೊತೆಗೆ ಕಟ್ಟಡಗಳನ್ನೂ ಸುಟ್ಟು ಹಾಕುತ್ತಿದೆ. ಹವಾಯಿ ದ್ವೀಪವಂತೂ ಸ್ಮಶಾನವಾಗಿ ಮಾರ್ಪಟ್ಟಿದ್ದು, ಪ್ರವಾಸಿಗರು ಭೇಟಿ ನೀಡುವ ಎಲ್ಲಾ ಪ್ರದೇಶಗಳು ಕಪ್ಪು ಅವಶೇಷಗಳಾಗಿ ಹೋಗಿವೆ.
ಅಮೆರಿಕದ ಹವಾಯಿ ದ್ವೀಪದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿಲ್ಲ. ಕಾಳ್ಗಿಚ್ಚಿಗೆ ಇದುವರೆಗೆ 67 ಮಂದಿ ಬಲಿಯಾಗಿದ್ದಾರೆ ಎಂದು ಹವಾಯಿ ಮೇಯರ್ ಜೋಶ್ ಗ್ರೀನ್ ಮಾಹಿತಿ ನೀಡಿದ್ದಾರೆ.