ಜಿಲ್ಲಾ ಮಾಹಿತಿ ಮತ್ತು ವಾರ್ತಾ ಇಲಾಖಾ ಛಾಯಾಗ್ರಹಣ ಹುದ್ದೆಗೆ ಸತತ ಎರಡನೇ ಬಾರಿ ಶ್ರೀಕಾಂತ್ ಕಾಸರಗೋಡು ಆಯ್ಕೆ

Share with

ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ವಾರ್ತಾ ಇಲಾಖಾ ಛಾಯಾಗ್ರಹಣ ಹುದ್ದೆಗೆ ಯುವ ಛಾಯಾಗ್ರಾಹಕ ಶ್ರೀಕಾಂತ್ ಕಾಸರಗೋಡು ಆಯ್ಕೆಯಾಗಿದ್ದಾರೆ. ಇದೀಗ ಸತತ ಎರಡನೇ ಬಾರಿ ಆಯ್ಕೆಯಾಗುವ ಮೂಲಕ ಸೇವೆಗೆ ತೊಡಗಿದ ಶ್ರೀಕಾಂತ್ ಅವರು ಸಾಮಾಜಿಕ,ಧಾರ್ಮಿಕ,ಸಾಂಸ್ಕೃತಿಕ ರಂಗಗಳಲ್ಲಿ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಲಾವಿದ ಕುಟುಂಬದಲ್ಲಿ ಜನಿಸಿದ ಶ್ರೀಕಾಂತ್ ಅವರು ಬಿಇಎಂಎಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣದವರೆಗೆ ವ್ಯಾಸಂಗ ಮಾಡಿ ಬಳಿಕ ಕಾಸರಗೋಡು ಟಾಗೋರು ಕಾಲೇಜಿನಲ್ಲಿ ಪದವಿ ಶಿಕ್ಷಣಗೈದು ಬಳಿಕ ಛಾಯಾಗ್ರಹಣ ಆಸಕ್ತಿಯಿಂದ ದಿನೇಶ್ ಇನ್ ಸೈಟ್ ಅವರ ಸ್ಟುಡಿಯೋಗಳಲ್ಲಿ ಕ್ಯಾಮರಮೆನ್ ಆಗಿ ಸೇವೆ ಸಲ್ಲಿಸತೊಡಗಿದ್ದು ಈ ವೇಳೆ ಹಲವು ಚಿತ್ರಗಳು ಮೂಕ ವಿಸ್ಮಿತಗೊಳಿಸುವ ರೀತಿಯಲ್ಲಿ ಚಿತ್ರೀಕರಿಸಿದ್ದು ಕೆಲವು ಛಾಯಾಚಿತ್ರ ಸ್ಪರ್ಧೆಗಳಲ್ಲಿ ಕೂಡಾ ಭಾಗವಹಿಸಿದ್ದರು.

ಉದಯವಾಣಿ ಸಹಿತ ಹಲವು ಪತ್ರಿಕಾ ಮಾಧ್ಯಮಗಳಿಗೆ ಚಿತ್ರಗಳನ್ನು ಸೆರೆ ಹಿಡಿದು ಒಪ್ಪಿಸಿದ ಶ್ರೀಕಾಂತ್ ಅವರ ಚಿತ್ರಗಳು ಬಹು ಬೇಡಿಕೆಯಿಂದ ತರಂಗ,ತುಷಾರ,ಸುಧಾದಂತಹ ವಾರ ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ಈಲ್ಲೆಯ ಹಲವು ಧಾರ್ಮಿಕ ಶ್ರದ್ಧಾ ಕೇಂದ್ರ ಹಾಗೂ ಕನ್ನಡ ಸಮ್ಮೇಳನಗಳಲ್ಲಿ ಪ್ರಚಾರ ಸಮಿತಿಯಲ್ಲಿ ಸ್ಥಾನ ನಿರ್ವಹಿಸಿ ಜನಪ್ರಿಯರಾಗಿದ್ದ ಈ ಯುವ ಛಾಯಾಗ್ರಹಕ ನಟನಾಗಿ,ಯಕ್ಷಗಾನ ಕಲಾವಿದನಾಗಿ ಸಾಂಸ್ಕೃತಿಕ ರಂಗದಲ್ಲೂ ಮಿಂಚಿದ್ದಾರೆ.

ಕಾರ್ಲೆ ಶ್ರೀಕಾಳಿಕಾಂಬ ದೇವಸ್ಥಾನ ಅರಿಕ್ಕಾಡಿಯ ಸಮಿತಿಯಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದು ಗಡಿನಾಡ ಕಲಾವಿದರು,ಆಲ್ ಕೇರಳ ಮೋಹನ್ ಲಾಲ್ ಫ್ಯಾನ್ಸ್ ,ಆಲ್ ಕೇರಳ ಫೋಟೊಗ್ರಾಫರ್ಸ್ ಆಸೋಸಿಯೇಶನ್, ದುರ್ಗಾ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಫ್ರೆಂಡ್ಸ್ ಕ್ಲಬ್,ರಾಮನಾಥ ಸಾಂಸ್ಕೃತಿಕ ಭವನ,ಕಾರವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಹೋರಾಟ ಸಮಿತಿ,ವಿಶ್ವಕರ್ಮ ಯುವಕ ಸಂಘ ಕಾಸರಗೋಡು ಪ್ರೆಸ್ ಕ್ಲಬ್ ಮೊದಲಾದ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ದುಡಿಯುತ್ತಿರುವ ಶ್ರೀಕಾಂತ್ ಜನಪ್ರೀತಿ ಗಳಿಸಿ ಉಳಿಸಿಕೊಂಡು ಇದೀಗ ಕಳೆದ ವರ್ಷ ಜಿಲ್ಲಾ ಮಾಹಿತಿ ಮತ್ತು ವಾರ್ತಾ ಇಲಾಖೆಗೆ ಛಾಯಾಗ್ರಹಣ ಹುದ್ದೆಗೆ ಆಯ್ಕೆಯಾಗಿದ್ದು ಈ ಬಾರಿಯೂ ಮರು ಆಯ್ಕೆಯಾಗಿರುವುದು ಇವರ ಆಪ್ತ ವಲಯದಲ್ಲಿ ಸಂತಸ ತಂದಿದೆ. ಮಂಜೇಶ್ವರ- ಕಾಸರಗೋಡು ಭಾಗದಿಂದ ಇಲಾಖೆಗೆ ಆಯ್ಕೆಯಾದ ಏಕೈಕ ಕನ್ನಡಿಗ ಎಂಬುದು ಅಭಿಮಾನದ ವಿಷಯ.


Share with

Leave a Reply

Your email address will not be published. Required fields are marked *