ಮಂಗಳೂರು: ಕನ್ಯಾನ ಸದಾಶಿವ ಶೆಟ್ಟಿ ಸಮರ್ಥ ಮುಂದಾಳತ್ವದಲ್ಲಿ ಡಾ. ಮಮತಾ ಪಿ ಶೆಟ್ಟಿ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಅಭಿಮತ ಟೀವಿಯ ಐದು ವರ್ಷದ ಪಂಚಮ ಸಂಭ್ರಮ ಹಾಗೂ ಮಂಗಳೂರು ಕೆಪಿಟಿ ಬಳಿಯ ಶರಭತ್ ಕಟ್ಟೆ ಶ್ರೀನಿ ಟವರ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭ ಸೆ.3ರಂದು ರವಿವಾರ ಬೆಳಗ್ಗೆ 9:30ಕ್ಕೆ ನಡೆಯಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.