ತಿರುಪತಿಯಲ್ಲಿ ಕಾಲ್ತುಳಿತ; 6 ಭಕ್ತರ ಸಾವು

Share with

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿದಿನ ಲಕ್ಷಾಂತರ ಜನರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇನ್ನು ಬೇರೆ ಬೇರ ದೇಶಗಳಿಂದ, ರಾಜ್ಯಗಳಿಂದ ಭಕ್ತರ ದಂಡೇ ಇಲ್ಲಿಗೆ ಬರುತ್ತದೆ.

ಲಕ್ಷಾನುಗಟ್ಟಲೆ ಭಕ್ತರಿಂದ, ತಿರುಪತಿಯ ಏಳು ಬೆಟ್ಟಗಳು ಭಗವಾನ್ ಗೋವಿಂದನ ನಾಮದಿಂದ ದಿನಾ ಪ್ರತಿಧ್ವನಿಸುತ್ತಿರುತ್ತವೆ. ಲಕ್ಷಾಂತರ ಭಕ್ತರ ಆಗಮನದಿಂದ ತಿರುಮಲ ಕ್ಷೇತ್ರ ಸದಾ ಸಡಗರದಿಂದ ಕೂಡಿರುತ್ತದೆ. 

ಇನ್ನು ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯಲ್ಲಿ ಜನಸಾಗರವೇ ಹರಿದು ಬರುತ್ತಿದೆ. ಈ ಮಧ್ಯೆ ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯುವ ವೇಳೆ ಹೆಚ್ಚಾದ ಭಕ್ತಸಾಗರದಿಂದ ಕಾಲ್ತುಳಿತ ಉಂಟಾಗಿ 6 ಭಕ್ತರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನು ಈ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.

ಇದೇ ಜನವರಿ 10 ರಂದು ವೈಕುಂಠ ಏಕಾದಶಿ ನಡೆಯಲಿದೆ. ಈ ವೇಳೆ ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲಿದ್ದು, ತಿಮ್ಮಪ್ಪನ ಆಲಯದಲ್ಲಿ ಸಡಗರ ಮನೆ ಮಾಡಿರುತ್ತೆ.

ಆದ್ರೆ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ದಾರುಣ ಘಟನೆ ನಡೆದುಹೋಗಿದೆ. ಇದಕ್ಕಾಗಿ ಈಗಲೇ ಲಕ್ಷಗಟ್ಟಲೆ ಭಕ್ತರು ಕಾದು ಕುಳಿತಿದ್ದಾರೆ. ಈ ವೇಳೆ ವೈಕುಂಠ ದ್ವಾರದ ದರ್ಶನ ಟಿಕೆಟ್ ಪಡೆಯಲು ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಕೌಂಟರ್‌ ಬಳಿ ಬುಧವಾರ ಕಾಲ್ತುಳಿತ ಸಂಭವಿಸಿ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


Share with