ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ರಿವೀಲ್ ಆದ ʼಟಾಕ್ಸಿಕ್ʼ ಬರ್ತ್ ಡೇ ಪೀಕ್ ಹೊಸ ದಾಖಲೆಯನ್ನು ಬರೆದಿದೆ.

ಬರ್ತ್ ಡೇ ಪೀಕ್ ಗ್ಲಿಂಪ್ಸ್‌ನಲ್ಲಿ ಯಶ್ ಹಿಂದೆಂದೂ ಕಾಣಿಸಿಕೊಳ್ಳದ ಬೋಲ್ಡ್ & ಡ್ಯಾಶಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಬ್‌ವೊಂದರಲ್ಲಿ ಪಾರ್ಟಿ ಮೂಡ್‌ನಲ್ಲಿ ಯಶ್ ಹಾಟ್ ಬೆಡಗಿಯರ ಜತೆ ಕಾಣಿಸಿಕೊಂಡಿದ್ದಾರೆ. ಗನ್ , ಗಾಂಜಾ ಹಾಗೂ ಗರ್ಲ್ಸ್ ಸುತ್ತ ಬರ್ತ್ ಡೇ ಪೀಕ್ ಗ್ಲಿಂಪ್ಸ್ ತೋರಿಸಲಾಗಿದೆ.

ಯಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಈ ಗ್ಲಿಂಪ್ಸ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಇಂಟರ್‌ನೆಟ್ ಧೂಳು ಎಬ್ಬಿಸಿದೆ. ಹಲವು ದಾಖಲೆಗಳನ್ನು ಪುಡಿಗಟ್ಟಿ, ತನ್ನದೇ ಆದ ಹೊಸ ದಾಖಲೆಯನ್ನು ಬರೆದಿದೆ.