ರಾಜ್ಯಮಟ್ಟದ ಯಕ್ಷ ರೂಪಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬಂಟ್ವಾಳ ತಾಲೂಕಿನ ಮಂಚಿ- ಕೊಳ್ನಾಡು ಸರಕಾರಿ ಪ್ರೌಢ ಶಾಲೆ

Share with

ಯಕ್ಷ ಧ್ರುವ ಯಕ್ಷ ಶಿಕ್ಷಣ ಪಟ್ಲ ಫೌಂಡೇಶನ್ ವತಿಯಿಂದ ಫೆ.6ರಂದು ಆಳ್ವಾಸ್ ವಿದ್ಯಾಗಿರಿಯಲ್ಲಿ ನಡೆದ ರಾಜ್ಯಮಟ್ಟದ ಯಕ್ಷ ರೂಪಕ ಸ್ಪರ್ಧೆಯಲ್ಲಿ “ಲಕ್ಷ್ಮೀ ಸ್ವಯಂವರ”- ಎನ್ನುವ ರೂಪಕವನ್ನು ಯಕ್ಷಗಾನ ಗುರುಗಳಾದ ಅಶ್ವತ್ ಮಂಜನಾಡಿ ಇವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿ, ದ್ವಿತೀಯ ಸ್ಥಾನವನ್ನು 20,000/= ನಗದು ಬಹುಮಾನ ದೊಂದಿಗೆ ಪುರಸ್ಕೃತರಾಗಿದ್ದಾರೆ.

ಆಳ್ವಾಸ್ ವಿದ್ಯಾಗಿರಿಯಲ್ಲಿ ನಡೆದ ರಾಜ್ಯಮಟ್ಟದ ಯಕ್ಷ ರೂಪಕ ಸ್ಪರ್ಧೆ

ಈ ಮೂಲಕ ಸರಕಾರಿ ಶಾಲೆ ಮಕ್ಕಳು ಸರಿಯಾದ ಮಾರ್ಗದರ್ಶನ ಸಿಕ್ಕರೆ ಖಾಸಗಿ ಶಾಲೆಗಳಿಗೆ ಪ್ರತಿ ಸ್ಪರ್ಧಿಗಳಾಗಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಯಕ್ಷಗಾನ ಗುರುಗಳಿಗೆ ಶಾಲಾಭಿವೃದ್ಧಿ ಸಮಿತಿ ಅಭಿನಂದನೆ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳು ಅಶ್ವಥ್ ಮಂಜನಾಡಿ, ಶಾಲಾಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರಾದ ಬಾಲಕೃಷ್ಣ ಸೇರ್ಕಳ ಮುಖ್ಯ ಶಿಕ್ಸಕಿ ಸುಶೀಲ ವಿಟ್ಲ, ಡಾಕ್ಟರ್ ಗೋಪಾಲ್ ಆಚಾರ್, ರಾಮಪ್ರಸಾದ್ ರೈ ತಿರುವಜೆ, ರಮೇಶ್ ಟೈಲರ್, ಶಿಕ್ಸಕ ತಾರಾನಾಥ್ ಕೈರಂಗಳ, ಅನುಸೂಯ ಟೀಚರ್, ಪಟ್ಲ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *